", "articleSection": "Sports,Education", "image": { "@type": "ImageObject", "url": "https://prod.cdn.publicnext.com/s3fs-public/286525-1756561420-WhatsApp-Image-2025-08-30-at-7.13.32-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಬಾಲಕರ ಮತ್ತ...Read more" } ", "keywords": "Sakleshpur, school sports meet, athletic competition, Morarji Desai Residential School, academic excellence, sports development, student achievements", "url": "https://dashboard.publicnext.com/node" }
ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಬಾಲಕರ ಮತ್ತು ಬಾಲಕಿಯರ ವೈಯಕ್ತಿಕ ತಂಡಗಳ ಚಾಂಪಿಯನ್ ಜೊತೆಗೆ ಶಾಲೆಗೆ ಸಮಗ್ರ ಚಾಂಪಿಯನ್ ಶಿಪ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ 3000 ಮೀಟರ್ - ಪ್ರಥಮ ಮತ್ತು ತೃತೀಯ, 1500 ಮೀಟರ್- ಪ್ರಥಮ, 800 ಮೀಟರ್ - ದ್ವಿತೀಯ, 400 ಮೀಟರ್ - ದ್ವಿತೀಯ, 200 ಮೀಟರ್ ಪ್ರಥಮ, ಗುಂಡು ಎಸೆತ ಪ್ರಥಮ ಮತ್ತು ದ್ವಿತೀಯ, ತಟ್ಟೆ ಎಸೆತ- ಪ್ರಥಮ ಮತ್ತು ದ್ವಿತೀಯ, ಜಾವೆಲಿನ್-ಪ್ರಥಮ, ತ್ರಿವಿಧ ಜಿಗಿತ- ಪ್ರಥಮ, ಕಬಡ್ಡಿ- ಪ್ರಥಮ, ವಾಲಿಬಾಲ್ -ಪ್ರಥಮ, ಥ್ರೋ ಬಾಲ್-ಪ್ರಥಮ ಸ್ಥಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ 3000- ಪ್ರಥಮ,1500-ಪ್ರಥಮ, 200-ಪ್ರಥಮ, 100- ಪ್ರಥಮ ಮತ್ತು ತೃತೀಯ, 4*100- ಪ್ರಥಮ, 4*400-ಪ್ರಥಮ, ಗುಂಡು ಎಸೆತ -ಪ್ರಥಮ, ಜಾವೆಲಿನ್-ದ್ವಿತೀಯ, ದೂರ ಜಿಗಿತ-ಪ್ರಥಮ, ತ್ರಿವಿಧ ಜಿಗಿತ- ಪ್ರಥಮ ಮತ್ತು ದ್ವಿತೀಯ, ಕಬಡ್ಡಿ-ಪ್ರಥಮ, ವಾಲಿಬಾಲ್ - ಪ್ರಥಮ, ಥ್ರೋ ಬಾಲ್-ದ್ವಿತೀಯ, ಬಾಲ್ ಬ್ಯಾಡ್ಮಿಂಟನ್-ಪ್ರಥಮ. ವೈಯಕ್ತಿಕ ಚಾಂಪಿಯನ್ - ಬಾಲಕರು ಪ್ರಥಮ, ಬಾಲಕಿಯರು ಪ್ರಥಮ ಪ್ರಶಸ್ತಿ ಗಳಿಸಿದರು.
ತಂಡ ಚಾಂಪಿಯನ್ ಶಿಪ್ ನಲ್ಲಿ ಬಾಲಕರು ಪ್ರಥಮ, ಬಾಲಕಿಯರು ಪ್ರಥಮ ಸ್ಥಾನ ಗಳಿಸಿ 194 ಅಂಕಗಳೊಂದಿಗೆ ಮೊರಾರ್ಜಿ ದೇಸಾಯಿ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಯಿತು. ತಂಡದ ಉತ್ತಮ ಸಾಧನೆಗೆ ಕಾರಣರಾದ ದೈಹಿಕ ಶಿಕ್ಷಣ ತರಬೇತುದಾರರಿಗೆ ಹಾಗೂ ಶಿಕ್ಷಕರಿಗೆ ಭೋದಕೇತರ ವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.
PublicNext
30/08/2025 07:13 pm