", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1757229059-Canva---2025-09-07T124051.054.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಕಲೇಶಪುರ: 2025-26ನೇ ಸಾಲಿನ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹೆತ್ತೂರು ಪಿಯು ಕಾಲೇಜಿನ ವಿದ್ಯಾರ್ಥಿನಿ ಕು. ಸಿಂಚ...Read more" } ", "keywords": "Personal Champion Ku. Sinchan, Sakaleshpur PU College news, Hetturu PU College achievements, Karnataka education news, student awards Sakaleshpur, PU College students accomplishments, ", "url": "https://dashboard.publicnext.com/node" }
ಸಕಲೇಶಪುರ: 2025-26ನೇ ಸಾಲಿನ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹೆತ್ತೂರು ಪಿಯು ಕಾಲೇಜಿನ ವಿದ್ಯಾರ್ಥಿನಿ ಕು. ಸಿಂಚನ ವೈಯುಕ್ತಿಕ ಚಾಂಪಿಯನ್ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಭರ್ಜಿಯ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಿಂಚನ, ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರು.
ಇದೇ ಸಂದರ್ಭದಲ್ಲಿ ಕಾಲೇಜಿನ ಇತರೆ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ತೋರಿದ್ದು, ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ – 3000 ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, 4x100 ಮೀ. ಓಟ ಪ್ರಥಮ, ಹ್ಯಾಮರ್ ಥ್ರೋ ದ್ವಿತೀಯ ಮತ್ತು ತೃತೀಯ, 800 ಮೀ. ಓಟ ದ್ವಿತೀಯ ಮತ್ತು ತೃತೀಯ, 100 ಮೀ. ಓಟ ತೃತೀಯ, 400 ಮೀ. ಓಟ ದ್ವಿತೀಯ, ಖೋಖೋ ದ್ವಿತೀಯ, ಟೆನ್ನಿಕಾಯ್ಟ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ – ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಟೆನ್ನಿಕಾಯ್ಟ್ ಪ್ರಥಮ, ಎತ್ತರ ಜಿಗಿತ ಪ್ರಥಮ ಹಾಗೂ ಉದ್ದ ಜಿಗಿತ ದ್ವಿತೀಯ ಸ್ಥಾನವನ್ನು ಕಾಲೇಜು ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಬಿ.ಡಿ. ಹಾಗೂ ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದರು.
Kshetra Samachara
07/09/2025 12:41 pm