", "articleSection": "Politics,Infrastructure,Science and Technology,Nature,Government", "image": { "@type": "ImageObject", "url": "https://prod.cdn.publicnext.com/s3fs-public/229640-1756724998-hbl1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಬೇಕಿದ್ದ ಜೈವಿಕ ಅನಿಲ ಯೋಜನೆಗೆ ಹಿನ್ನಡೆಯಾಗಿದೆ. ಒಂದು ವರ್ಷದ ಅವಧಿ ಮೀರಿದರೂ ಬೆಳವಣಿಗೆ ಮಾತ್ರ ಗೋಚ...Read more" } ", "keywords": "hubballi, biogas plant project, hubballi biogas scheme, government silent on biogas project, hubballi development news, hubballi environmental project, karnataka government schemes, hubballi latest news, karnataka politics news, hubballi civic issues", "url": "https://dashboard.publicnext.com/node" } ಹುಬ್ಬಳ್ಳಿ: ಜೈವಿಕ ಅನಿಲ ಘಟಕದ ಯೋಜನೆ ನೆನೆಗುದಿಗೆ - ಪ್ರಚಾರ ಪಡೆದಿದ್ದ ಸರ್ಕಾರ ಈಗ ಸೈಲೆಂಟ್..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೈವಿಕ ಅನಿಲ ಘಟಕದ ಯೋಜನೆ ನೆನೆಗುದಿಗೆ - ಪ್ರಚಾರ ಪಡೆದಿದ್ದ ಸರ್ಕಾರ ಈಗ ಸೈಲೆಂಟ್..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಬೇಕಿದ್ದ ಜೈವಿಕ ಅನಿಲ ಯೋಜನೆಗೆ ಹಿನ್ನಡೆಯಾಗಿದೆ. ಒಂದು ವರ್ಷದ ಅವಧಿ ಮೀರಿದರೂ ಬೆಳವಣಿಗೆ ಮಾತ್ರ ಗೋಚರಿಸುತ್ತಿಲ್ಲ. ಈ ಯೋಜನೆಯನ್ನ ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ವರ್ಷ ಕಳೆದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಜೈವಿಕ ಸಿ.ಎನ್.ಜಿ ಅನಿಲ ಘಟಕ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಯೋಜನೆ ಘೋಷಿಸಿ, ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದ್ದರೂ ಘಟಕ ಸ್ಥಾಪನೆಯಾಗಿಲ್ಲ. ಹುಬ್ಬಳ್ಳಿ ಸೇರಿ ಬೆಂಗಳೂರು, ಮೈಸೂರು, ಬಳ್ಳಾರಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಈ ಯೋಜನೆ ಘೋಷಣೆ ಮಾಡಿದ್ದ ಸಿಎಂ, ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತರಕಾರಿ, ಹೂವು-ಹಣ್ಣುಗಳ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಸಿ.ಎನ್‌.ಜಿ ಅನಿಲ ತಯಾರಿಸುವ ಘಟಕ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದು, ಈಗ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಏನಂತಾರೇ ನೋಡಿ..

ಇನ್ನೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಪ್ರಕಟಿಸಿದ್ದ ಮುಖ್ಯಮಂತ್ರಿನವರು ಇದುವರೆಗೂ ಈ ಬಗ್ಗೆ ಚಿಂತನೆ ನಡೆಸಿಲ್ಲ. ಈ ಯೋಜನೆಗಾಗಿ ಹುಬ್ಬಳ್ಳಿಯ ಎಪಿಎಂಸಿ ಆವರಣದೊಳಗೆ ದನದ ಮಾರ್ಕೆಟ್ ಬಳಿ 2 ಎಕರೆ ಜಾಗ ಮೀಸಲಿಡಲಾಗಿದೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿದಿನ ತರಕಾರಿ, ಹೂವು- ಹಣ್ಣುಗಳ ಮಾರಾಟ ನಡೆಯುತ್ತದೆ. ದಿನದ ಅಂತ್ಯಕ್ಕೆ, ಮಾರಾಟದ ಬಳಿಕ ಉಳಿಯುವ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಇದರಿಂದ ಜೈವಿಕ ಸಿಎನ್‌ಜಿ ಅನಿಲ ತಯಾರಿಸುವ ಯೋಜನೆ. ಮಾರುಕಟ್ಟೆಯನ್ನು ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸುವ ಗುರಿಹೊಂದಿತ್ತು. ಆದರೆ ಇದುವರೆಗೂ ಯೋಜನೆ ಜಾರಿಗೆ ಬಂದಿಲ್ಲ ಎಂಬುವುದು ಸಾರ್ವಜನಿಕರ ಮಾತು.

ಒಟ್ಟಿನಲ್ಲಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಬಜೆಟ್‌ನಲ್ಲಿ ಕೇವಲ ಪ್ರಚಾರ ಪಡೆಯುವುದಕ್ಕಾಗಿ ಈ ಯೋಜನೆ ಪ್ರಕಟಿಸಿದಂತಿದಾಗಿದೆ ಎಂಬುದು ಸಾರ್ವಜನಿಕ ಮಾತು.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/09/2025 04:40 pm

Cinque Terre

121.56 K

Cinque Terre

1

ಸಂಬಂಧಿತ ಸುದ್ದಿ