ಚಿಂತಾಮಣಿ : ವಾಹನ ಚಾಲಕನಿಗೆ ಮೂರ್ಛೆ ಬಂದ ಹಿನ್ನೆಲೆಯಲ್ಲಿ ಆಪೆ ಆಟೋ ಹಳ್ಳಕ್ಕೆ ಬೀಳಿಸಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿಹಳ್ಳಿ ಬಳಿ ಸಂಭವಿಸಿದೆ.
ಆಂಧ್ರ ಪ್ರದೇಶದ ಕದರಿ ಗ್ರಾಮದಿಂದ ಚಿಂತಾಮಣಿಗೆ ಬಾಳೆಹಣ್ಣು ಹಾಕಿಕೊಂಡು ಬಂದು ಮತ್ತೆ ವಾಪಾಸ್ ಕಡಪ ಹೈವೇ ರಸ್ತೆ ಮುಖಾಂತರ ತೆರಳುತ್ತಿದ್ದ ವೇಳೆ ಐಮರೆಡ್ಡಿಹಳ್ಳಿ ಬಳಿ ಆಪೆ ಆಟೋ ಚಾಲಕ ಫಯಾಜ್ ಎಂಬಾತನಿಗೆ ಮೂರ್ಚೆ ಬಂದ ಹಿನ್ನೆಲೆಯಲ್ಲಿ ಆಟೋವನ್ನು ಹಳ್ಳಕ್ಕೆ ಬೀಳಿಸಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಬಚಾವ್ ಮಾಡಿ ವಾಪಾಸ್ ಕಳುಹಿಸಿಕೊಟ್ಟಿದ್ದಾರೆ. ಘಟನೆಯಲ್ಲಿ ಆಟೋ ಗಾಜುಗಳು ಪುಡಿ ಪುಡಿಯಾಗಿ ಫಯಾಜ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಚಿಕ್ಕತೇಕಹಳ್ಳಿ ಡಿ.ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ
PublicNext
03/09/2025 10:39 am