", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/222042-1757308641-Canva---2025-09-08T104713.173.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಂಗಿಯ 6 ವರ್ಷದ ಮಗನ ಕೊಂದ ದೊಡ್ಡಮ್ಮಳಿಗೆ ನಗರದ ಹೆಚ್ಚುವರಿ 3ನೇ ಜಿಲ್ಲಾ ಮತ್ತು ಸತ...Read more" } ", "keywords": "aunt sentenced to life imprisonment, murder of sister's son, Chikkaballapur crime, family feud, life imprisonment for aunt, Indian court sentences aunt, murder case, family dispute turns deadly, aunt convicted of murder, ", "url": "https://dashboard.publicnext.com/node" } ಚಿಕ್ಕಬಳ್ಳಾಪುರ: ತಂಗಿಯ ಮಗನ ಹತ್ಯೆಗೈದ ದೊಡ್ಡಮ್ಮಳಿಗೆ ಜೀವಾವಧಿ ಶಿಕ್ಷೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ತಂಗಿಯ ಮಗನ ಹತ್ಯೆಗೈದ ದೊಡ್ಡಮ್ಮಳಿಗೆ ಜೀವಾವಧಿ ಶಿಕ್ಷೆ

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಂಗಿಯ 6 ವರ್ಷದ ಮಗನ ಕೊಂದ ದೊಡ್ಡಮ್ಮಳಿಗೆ ನಗರದ ಹೆಚ್ಚುವರಿ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.

ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಮಾವಹಳ್ಳಿ ಗ್ರಾಮದ ನಿವಾಸಿ ಅಂಬಿಕಾ ಕೊಂ ರಾಜಣ್ಣ (30) ಎಂದು ಗುರುತಿಸಲಾಗಿದೆ. ಅಂಬಿಕಾ 2023ರ ನವೆಂಬರ್‌ನಲ್ಲಿ ತನ್ನ ತಂಗಿ ಅನಿತಾ ಕೋಂ ವಿಶ್ವನಾಥ (2 7) ಎಂಬುವರ ಪುತ್ರ 6 ವರ್ಷದ ಮಧುನನ್ನು ಅಪಹರಿಸಿ ಕೊಲೆ ಮಾಡಿದ್ದಳು.

ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಎಸ್.ಶಿವಕುಮಾ‌ರ್ ಮಾರ್ಗದರ್ಶನದಲ್ಲಿ ಗುಡಿಬಂಡೆ ಠಾಣೆ ವೃತ್ತ ನಿರೀಕ್ಷಕನ ಯಾಜ್ ಬೇಗ್ ಈ ಕುರಿತು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಜಿಲ್ಲೆಯ ಹೆಚ್ಚುವರಿ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವಾದ, ಪ್ರತಿವಾದ ನಡೆದು ಅಂಬಿಕಾ ತನ್ನ ತಂಗಿ ಅನಿತಾ ಅವರ 6 ವರ್ಷದ ಬಾಲಕನ ಅಪಹರಿಸಿ ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಆದೇಶ ಪ್ರಕಟಿಸಿ ಅಂಬಿಕಾಗೆ 25,000 ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ವರದಿ: ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Vijay Kumar
PublicNext

PublicNext

08/09/2025 10:47 am

Cinque Terre

10.76 K

Cinque Terre

0

ಸಂಬಂಧಿತ ಸುದ್ದಿ