ಶಿಡ್ಲಘಟ್ಟ: ಗಣೇಶ ವಿಸರ್ಜನೆ ವೇಳೆ ತಮಟೆಯ ಸದ್ದಿಗೆ ಡ್ಯಾನ್ಸ್ ಮಾಡುತ್ತಿದ್ದಂತ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದುಗೂರು ಗ್ರಾಮದಲ್ಲಿ ನಡೆದಿದೆ.
ಬೋದುಗೂರು ಗ್ರಾಮದ ನಿವಾಸಿ 40 ವರ್ಷದ ಲಕ್ಷ್ಮೀಪತಿ ಮೃತ ದುರ್ದೈವಿ. ತಮಟೆಯ ಏಟಿಗೆ ನೃತ್ಯ ಮಾಡುತ್ತಿದ್ದಂತೆ ಕೆಳಗೆ ಬಿದ್ದ ಲಕ್ಷ್ಮೀಪತಿ ಪ್ರಾಣಪಕ್ಷಿ ಹಾರಿಹೋಗಿದೆ. ಈ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
01/09/2025 10:50 am