ಚಿಂತಾಮಣಿ: ಸೆಪ್ಟೆಂಬರ್ 5ರಂದು ಆಚರಿಸುವ ಈದ್-ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗೂಡಿ ಶಾಂತಿ, ಸೌಹಾರ್ದತೆಯಿಂದ ಕಾನೂನು ವ್ಯಾಪ್ತಿಯಲ್ಲಿ ಆಚರಿಸಬೇಕು ಎಂದು ನಗರಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್
ಹಬ್ಬದ ಅಂಗವಾಗಿ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳನ್ನು ಅಂಟಿಸಬೇಕಾದರೆ ನಗರಸಭೆಯ ಅನುಮತಿಯನ್ನು ಪಡೆದಿರಬೇಕು. ಇತರರಿಗೆ ತೊಂದರೆ ಆಗದಂತೆ, ಬೇರೆಯವರ ಕೈಗೆ ಎಟುಕದಂತೆ ಸಾಕಷ್ಟು ಎತ್ತರದಲ್ಲಿ ಅಳವಡಿಸಬೇಕು. ಇತರರಿಗೆ ಚೆನ್ನಾಗಿ ಕಾಣುವಂತೆ ಬೆಳಕು, ಸಿಸಿ ಕ್ಯಾಮರಾ ಇರುವ ಸ್ಥಳಗಳಲ್ಲಿ ಅಳವಡಿಸಬೇಕು.
ಹಬ್ಬದ ಮೆರವಣಿಗೆಯಲ್ಲಿ, ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಬೇರೆ ಸಮುದಾಯಗಳಿಗೆ ಪ್ರಚೋದನೆಗೆ ಅವಕಾಶವಾಗುವಂತಹ ಪದಗಳು ಮತ್ತು ಚಿತ್ರಗಳನ್ನು ಬಳಸಬಾರದು. ಮೆರವಣಿಗೆಯಲ್ಲಿ ಯುವಕರು ಬೈಕ್ ಸವಾರಿ, ವಾಹನಗಳ ಮೇಲೆ ಹತ್ತಿ ಕುಳಿತುಕೊಳ್ಳುವುದನ್ನು ಮಾಡಬಾರದು. ಡಿ.ಜೆ.ಬಳಸಬಾರದು. ಹಿಂದೂ ಮುಸ್ಲಿಂ ಬಾಂಧವರು ಸಹಕಾರದೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಮಸೀದಿಗಳಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ನಗರಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್ ಸಲಹೆ ನೀಡಿದರು.
PublicNext
02/09/2025 07:24 pm