", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/457940_1757202719_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "9535981195" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಡಿಕೇರಿ: ಮೈಸೂರು ದಸರಾ ಉದ್ಘಾಟನೆಗೆ ದೀಪಾ ಬಸ್ತಿ ಅವರನ್ನು ಬಿಟ್ಟು ಬಾನು ಮುಷ್ತಾಕ್‌ಗೆ ಆಹ್ವಾನ ನೀಡಿ ಚಾಮುಂಡೇಶ್ವರಿಗೆ ಅಪಮಾನ ಮಾಡಲಾಗಿದ್ದು,...Read more" } ", "keywords": "Mysore Challo, ", "url": "https://dashboard.publicnext.com/node" }
ಮಡಿಕೇರಿ: ಮೈಸೂರು ದಸರಾ ಉದ್ಘಾಟನೆಗೆ ದೀಪಾ ಬಸ್ತಿ ಅವರನ್ನು ಬಿಟ್ಟು ಬಾನು ಮುಷ್ತಾಕ್‌ಗೆ ಆಹ್ವಾನ ನೀಡಿ ಚಾಮುಂಡೇಶ್ವರಿಗೆ ಅಪಮಾನ ಮಾಡಲಾಗಿದ್ದು, ಹೀಗಾಗಿ ಹಿಂದೂ ಜಾಗರಣ ವೇದಿಕೆಯಿಂದ ನಡೆಯಲಿರುವ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮದಲ್ಲಿ ಕೊಡಗಿನಿಂದಲೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾಕ್ಕೆ ತನ್ನದೆ ಆದ ಆಚಾರ ವಿಚಾರ ಇದೆ. ಮೈಸೂರು ಅರಸರು ಆರಂಭಿಸಿದ ದಸರಾ ರೀತಿಯೇ ಚಾಲನೆ ಮಾಡಬೇಕಾಗುತ್ತದೆ. ಆದರೆ ಕನ್ನಡಾಂಬೆಗೆ ಹರಿಶಿಣ ಕುಂಕುಮ ಹಚ್ಚಿ ಹಿಂದೂ ಧರ್ಮದ ರೀತಿ ಮಾಡಲಾಗಿದೆ, ನಮ್ಮನ್ನು ಬಾಯಿಮುಚ್ಚಿಸಿದ್ದಾರೆ ಎಂದಿದ್ದ ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ನಿಜವಾಗಿಯೂ ಪ್ರಶಸ್ತಿ ಬಂದಿರುವುದು ದೀಪಾ ಬಸ್ತಿ ಅವರಿಗೆ, ಅವರನ್ನು ದಸರಾ ಉದ್ಘಾಟನೆಗೆ ಕರೆಯಬೇಕಾಗಿತ್ತು. ಆದರೆ ಅವರನ್ನು ಬಿಟ್ಟು ಚಾಮುಂಡೇಶ್ವರಿಗೆ ಅಪಮಾನ ಮಾಡಲಾಗಿದ್ದು, ಹೀಗಾಗಿ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ ಚಾಮುಂಡಿಬೆಟ್ಟಕ್ಕೆ ಚಲೋ ಕಾರ್ಯಕ್ರಮದಲ್ಲಿ ಕೊಡಗಿನಿಂದಲೂ ಸಾವಿರಾರು ಕಾರ್ಯಕರ್ತರು ತೆರಳಲಿದ್ದಾರೆ ಎಂದರು.
Kshetra Samachara
07/09/2025 05:22 am