ಚಿತ್ರದುರ್ಗ: ಸ್ಟಾಫ್ ನರ್ಸ್ ಒಬ್ಬರ ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಂ.ಜೆ ಕೃಷ್ಣ ಇಟ್ಟಿದ್ದರು. ಈ ಲಂಚಕ್ಕೆ ಬೇಡಿಕೆಯಿಟ್ಟಿದ್ದಂತ ಆಡಿಯೋ ಕೂಡ ವೈರಲ್ ಆಗಿತ್ತು.ಹಿನ್ನಲೆಯಲ್ಲಿ ವೈದ್ಯ ಡಾ.ಎಂ.ಜೆ ಕೃಷ್ಣ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್ ಕೆ.ಬಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಡಾ|| ಎಂ.ಜೆ. ಶ್ರೀ ಕೃಷ್ಣ ಇವರು ಈ ಹಿಂದೆ ಪ್ರಾ.ಆ.ಕೇಂದ್ರ, ಜೂಲಪಾಳ್ಯ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎಸಗಿದ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪಕ್ಕೆ ಸಂಬಂಧಿಸಿದ ದೂರಿನ ಮೇರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆಯುಕ್ತಾಲಯದಿಂದ ಆದೇಶಿಸಲಾಗಿರುತ್ತದೆ.
ವೈದ್ಯರು ದಿನಾಂಕ: 21-09-2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ಸದರಿ ವೈದ್ಯರು ಪ್ರಾ. ಆ. ಕೇಂದ್ರ, ಜವನಗೊಂಡನಹಳ್ಳಿ, ಇಲ್ಲಿಗೆ ದೈನಂದಿನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೇ ಗೈರು ಹಾಜರಾಗುತ್ತಿದ್ದು, ವೈದ್ಯರು ಸಾರ್ವಜನಿಕ ಸೇವೆಯಲ್ಲಿದ್ದು, ಜನ ಪ್ರತಿನಿಧಿಗಳ ಜೊತೆಯಲ್ಲಿ ಗೌರವಯುತವಾಗಿ ವರ್ತಿಸದೇ ಇರುವುದು, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದೇ ಇರುವುದು, ಪದೇ ಪದೇ ಗೈರು ಹಾಜರಿಯಾಗುತ್ತಿರುವುದು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ಕಂಡು ಬಂದ ಹಿನ್ನೆಲೆ ಹಾಗೂ ವೈದ್ಯರ ಲಂಚ ಬೇಡಿಕೆ ಆಡಿಯೋ ವೈರಲ್" ಎಂಬ ಕಾರಣದಿಂದ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್ ಕೆ.ಬಿ ನಡವಳಿಯನ್ನು ಹೊರಡಿಸಿದ್ದಾರೆ.
PublicNext
07/09/2025 07:34 am