", "articleSection": "Education", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/344547_1757345014_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ : ಶಿಕ್ಷಣದಿಂದ ಮಾತ್ರ ಉನ್ನತ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ಗೌರವವನ್ನು ಗಳಿಸಲು ಸಾಧ್ಯ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು....Read more" } ", "keywords": "Education is key to achieving high positions and respect, says MLA T. Raghumurthy", "url": "https://dashboard.publicnext.com/node" } ಚಳ್ಳಕೆರೆ : ಶಿಕ್ಷಣದಿಂದಲೇ ಉನ್ನತ ಹುದ್ದೆ ಹಾಗೂ ಗೌರವ ಸಾಧ್ಯ – ಶಾಸಕ ಟಿ. ರಘುಮೂರ್ತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಶಿಕ್ಷಣದಿಂದಲೇ ಉನ್ನತ ಹುದ್ದೆ ಹಾಗೂ ಗೌರವ ಸಾಧ್ಯ – ಶಾಸಕ ಟಿ. ರಘುಮೂರ್ತಿ

ಚಳ್ಳಕೆರೆ : ಶಿಕ್ಷಣದಿಂದ ಮಾತ್ರ ಉನ್ನತ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ಗೌರವವನ್ನು ಗಳಿಸಲು ಸಾಧ್ಯ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

ನಗರದ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಗೊಲ್ಲ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡುವ ಸಂಕಲ್ಪವನ್ನು ಹೊಂದಬೇಕು ಎಂದು ಕರೆ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಸಮಾಜ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಶಿಕ್ಷಕರು ಮತ್ತು ಕುಟುಂಬದ ಹಿರಿಯರ ಆಶಯದಂತೆ ಜೀವನವನ್ನು ರೂಪಿಸಿಕೊಳ್ಳುವ ಗುರಿ ವಿದ್ಯಾರ್ಥಿಗಳಿಗೆ ಇರಬೇಕು. ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕೇವಲ ಮನರಂಜನೆಗೆ ಅಲ್ಲ, ಜ್ಞಾನಾರ್ಜನೆಗೆ ಮಾತ್ರ ಬಳಸಿ ಮುಂದುವರಿಯಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸನ್ಮಾನ ಪಡೆದ ಕ್ಷಣದಲ್ಲೇ ಜವಾಬ್ದಾರಿ ಮುಗಿದಂತಾಗಬಾರದು. ಸೋಮಾರಿತನವನ್ನು ತೊರೆದು, ಮುಂದೆ ಕೂಡ ಉತ್ತಮ ವಿದ್ಯಾಭ್ಯಾಸದಲ್ಲಿ ತೊಡಗಿ ತಂದೆ ತಾಯಿಗಳ ಕನಸುಗಳನ್ನು ಈಡೇರಿಸಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.

ಅದೇ ವೇಳೆ, ಸರ್ಕಾರ ಶಾಲೆಗಳಲ್ಲಿಯೂ ಆಂಗ್ಲ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದು, ಪಠ್ಯಪುಸ್ತಕದಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರಿಂದ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ಅವರು ಹೇಳಿದರು.

Edited By : PublicNext Desk
PublicNext

PublicNext

08/09/2025 08:53 pm

Cinque Terre

21.26 K

Cinque Terre

0

ಸಂಬಂಧಿತ ಸುದ್ದಿ