", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/344547_1757340805_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ಜಾತಿ ವ್ಯವಸ್ಥೆಯನ್ನು ವಿರೋಧಿಸಿ “ಎಲ್ಲಾ ಜಾತಿ, ಧರ್ಮ ಒಂದೇ” ಎಂಬ ಸಂದೇಶವನ್ನು ಸಾರಿದ ಮಹಾನ್ ಮಾನವತಾವಾದಿಯಾಗಿದ್ದರು ನಾರಾಯಣ ಗುರು...Read more" } ", "keywords": "Narayan Guru's teachings on humanity and education Importance of education in Narayan Guru's philosophy", "url": "https://dashboard.publicnext.com/node" }
ಚಳ್ಳಕೆರೆ: ಜಾತಿ ವ್ಯವಸ್ಥೆಯನ್ನು ವಿರೋಧಿಸಿ “ಎಲ್ಲಾ ಜಾತಿ, ಧರ್ಮ ಒಂದೇ” ಎಂಬ ಸಂದೇಶವನ್ನು ಸಾರಿದ ಮಹಾನ್ ಮಾನವತಾವಾದಿಯಾಗಿದ್ದರು ನಾರಾಯಣ ಗುರುಗಳು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರತಿಯೊಂದು ಜಾತಿಯ ಹಾಗೂ ಧರ್ಮದ ಗುರುಗಳು ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತ ಬಂದರೂ, ಇತ್ತೀಚೆಗೆ ಜನರ ಮನಸ್ಸಿನಲ್ಲಿ ತಮ್ಮ ಜಾತಿ–ಧರ್ಮದ ಅಹಂ ಬೆಳೆಯುತ್ತಿರುವುದು ದುಃಖದ ಸಂಗತಿಯಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳು ಸಮಾಜದ ಎಲ್ಲ ಜಾತಿ ದಾರ್ಶನಿಕರ ತತ್ವ–ಸಿದ್ಧಾಂತಗಳನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ 2013ರಿಂದ ಎಲ್ಲ ಜಾತಿಯ ಜಯಂತಿಗಳನ್ನು ಆಚರಿಸಲು ಆದೇಶ ನೀಡಿದ್ದರು ಎಂದು ಅವರು ತಿಳಿಸಿದರು.
ನಾರಾಯಣ ಗುರುಗಳು ಶಿಕ್ಷಣದ ಮಹತ್ವದ ಬಗ್ಗೆ ಸಾರಿದ್ದು, ಸಮಾಜದ ಎಲ್ಲಾ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಪ್ರಜೆಯಾಗಿ ರೂಪಿಸಲು ಪ್ರಯತ್ನಿಸಬೇಕು ಎಂದರು.
ಇದಲ್ಲದೆ, ರಾಜಕೀಯದಲ್ಲಿಯೂ ಈ ಸಮುದಾಯ ಉತ್ತಮ ಕೊಡುಗೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಂತಹ ಸಜ್ಜನ ನಾಯಕರು ರಾಜ್ಯದ ಬಡ ಹಾಗೂ ದೀನ ದಲಿತರ ಉದ್ಧಾರದ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಸ್ಮರಿಸಿದರು.
PublicNext
08/09/2025 07:43 pm