ಮೊಳಕಾಲ್ಮುರು: ನಿಂತಿದ್ದ ಲಾರಿ ಏಕಾಏಕಿಯಾಗಿ ಚಲಿಸಿದ ಕಾರಣ ಮುಂದೆ ಇದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಹತ್ತಾರು ವಾಹನಗಳು ಜಖಂಗೊಂಡಿವೆ.
ಬಿಜಿಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಬಳ್ಳಾರಿಗೆ ತೆರಳುವ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಪೊಲೀಸ್ ಠಾಣೆ ಮುಂಭಾಗದಲ್ಲಿ ಅಶೋಕ ಲೈಲ್ಯಾಂಡ್ ಲಾರಿಯನ್ನು ಚಾಲಕ ನಿಲ್ಲಿಸಿ ವಿರಮಿಸುತ್ತಿದ್ದ. ಆದ್ರೆ, ಲಾರಿ ಏಕಾಏಕಿಯಾಗಿ ಮುಂದಕ್ಕೆ ಚಲಿಸಿದೆ, ಲಾರಿ ಚಲಿಸುವಾಗ ಮುಂದೆ ಇದ್ದ ಈಚರ್ ಲಾರಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಈಚರ್ ಲಾರಿಯ ಹಿಂಬದಿಯಿಂದ ಕಾರುಗಳು ಸೇರಿದಂತೆ ಆಟೋಗಳು, ಬೈಕುಗಳು, ಲಾರಿಗೆ ಸಿಲುಕಿ ಜಖಂಗೊಂಡಿವೆ.
ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ ಉಂಟಾಗಿಲ್ಲ. ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
07/09/2025 10:23 pm