ಚಳ್ಳಕೆರೆ: ತಾಲ್ಲೂಕಿನ ಉಪ್ಪಾರಹಟ್ಟಿ ಗ್ರಾಮದ 22 ವರ್ಷದ ಪವನ್ (ಅಪ್ಪು) ಎಂಬ ಯುವಕ ಹಬ್ಬದ ನಿಮಿತ್ತ ಬಂಜಗೆರೆ ಗ್ರಾಮಕ್ಕೆ ಹೋಗುತ್ತಿದ್ದಾಗ ಬೈಕ್ ಅಪಘಾತಕ್ಕೊಳಗಾಗಿ ತಲೆ ಸೇರಿದಂತೆ ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟುಗೊಂಡಿತು. ಸ್ಥಳೀಯರು ತಕ್ಷಣವೇ ಯುವಕನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅನಂತರ ಚಿಕಿತ್ಸೆ ಮುಂದುವರಿಸಲು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಮೃತಪಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಉಪ್ಪಾರಹಟ್ಟಿ ಗ್ರಾಮದಲ್ಲಿ ನಡೆಯಬೇಕಿದ್ದ ಮಾರಮ್ಮ ಹಬ್ಬವನ್ನು ಸ್ಥಗಿತಗೊಳಿಸಿ ಮುಂದಿನ ಮಂಗಳವಾರ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಉಪ್ಪಾರಹಟ್ಟಿಯ ಈರಣ್ಣ ತಿಳಿಸಿದ್ದಾರೆ.
PublicNext
08/09/2025 02:48 pm