ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಎಸ್‌ಟಿ ಕಡಿತ...ಟಾಟಾ ಕಂಪನಿಯ ಕಾರ್ ಗಳ ಬೆಲೆ 65 ಸಾವಿರದಿಂದ 1.45 ಲಕ್ಷ ರೂ.ವರೆಗೆ ಇಳಿಕೆ

ಮುಂಬೈ : ಕಾರ್ ಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿ ಜಿಎಸ್‌ಟಿ ಕೌನ್ಸಿಲ್ ತೀರ್ಮಾನ ಕೈಗೊಂಡಿದೆ. ಬೆನ್ನಲ್ಲೆ ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಟಾಟಾ ಮೋಟಾರ್ಸ್ ತೀರ್ಮಾನಿಸಿದೆ. ಹೀಗಾಗಿ ಟಾಟಾ ಕಂಪನಿಯ ಕಾರ್ ಗಳ ಬೆಲೆ 65 ಸಾವಿರ ರೂಪಾಯಿಯಿಂದ 1.45 ಲಕ್ಷ ರೂಪಾಯಿವರೆಗೂ ಕಡಿತಗೊಳಿಸಿದೆ. ಇದು ಗ್ರಾಹಕರಿಗೆ ಭರ್ಜರಿ ಲಾಭ ನೀಡುತ್ತಿದೆ.

ಹೌದು ಸೆ. 22 ರಿಂದ ಜಾರಿಗೆ ಬರುವಂತೆ ಪ್ರಯಾಣಿಕ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ.

ಹಬ್ಬದ ಋತುವಿಗೆ ಸ್ವಲ್ಪ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ತನ್ನ ಜನಪ್ರಿಯ ಕಾರುಗಳು ಮತ್ತು ಎಸ್‌ಯುವಿಗಳು ವಿವಿಧ ವಿಭಾಗಗಳಲ್ಲಿ ₹65,000 ರಿಂದ ₹1.55 ಲಕ್ಷದವರೆಗೆ ಬೆಲೆ ಕಡಿತಗೊಳ್ಳಲಿವೆ ಎಂದು ವಾಹನ ತಯಾರಕ ಕಂಪನಿ ದೃಢಪಡಿಸಿದೆ.

ನೆಕ್ಸಾನ್‌ ಕಾರಿಗೆ ಗರಿಷ್ಠ ಕಡಿತ, ಕರ್ವ್‌ಗೆ ಕನಿಷ್ಠ

ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ನೆಕ್ಸಾನ್ ಬೆಲೆ ₹1.55 ಲಕ್ಷದವರೆಗೆ ಕಡಿಮೆ ಆಗಲಿದೆ. ನಂತರ ಸಫಾರಿ ₹1.45 ಲಕ್ಷ ಮತ್ತು ಹ್ಯಾರಿಯರ್ ₹1.40 ಲಕ್ಷದವರೆಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಆರಂಭಿಕ ಹಂತದ ಮಾದರಿಗಳಲ್ಲಿ, ಟಿಯಾಗೊ ₹75,000, ಟಿಗೋರ್ ₹80,000, ಆಲ್ಟ್ರೋಜ್ ₹1.10 ಲಕ್ಷ ಮತ್ತು ಪಂಚ್ ₹85,000 ರಷ್ಟು ಅಗ್ಗವಾಗಲಿದೆ. ಟಾಟಾ ಹೊಸದಾಗಿ ಬಿಡುಗಡೆ ಮಾಡಿದ ಕರ್ವ್ ಬೆಲೆ ಕೂಡ ₹65,000 ರಷ್ಟು ಕಡಿತಗೊಳ್ಳಲಿದೆ.

ಜಿಎಸ್‌ಟಿ ಪರಿಷ್ಕರಣೆಯನ್ನು ಪ್ರಗತಿಪರ ಮತ್ತು ಸಕಾಲಿಕ ನಿರ್ಧಾರ ಎಂದು ಕರೆದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, ಗ್ರಾಹಕರಿಗೆ ಪ್ರಯೋಜನಗಳನ್ನು ವರ್ಗಾಯಿಸುವ ಮೂಲಕ ಕಂಪನಿಯು ಈ ಸುಧಾರಣೆಯ ಉದ್ದೇಶ ಮತ್ತು ಮನೋಭಾವವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದು ಹೇಳಿದ್ದಾರೆ.

ಹಬ್ಬಗಳ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ತಿದ್ದುಪಡಿಗಳ ನಂತರ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸುವುದರಿಂದ, ವಿತರಣೆಗಳನ್ನು ಪಡೆಯಲು ಮುಂಚಿತವಾಗಿ ಬುಕ್ ಮಾಡಲು ಟಾಟಾ ಮೋಟಾರ್ಸ್ ಗ್ರಾಹಕರನ್ನು ಕೋರಿದೆ.

Edited By : Nirmala Aralikatti
PublicNext

PublicNext

07/09/2025 12:38 pm

Cinque Terre

24.09 K

Cinque Terre

0

ಸಂಬಂಧಿತ ಸುದ್ದಿ