ಶಿರಹಟ್ಟಿ: ಕಾಯಕ ತತ್ವದ ಮೂಲಕ ಬಸವಣ್ಣನವರ ಮನಸ್ಸು ಗೆದ್ದ ಶಿವಶರಣ ಹೂಗಾರ ಮಾದಯ್ಯನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಸಮಾಜ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಶಿರಹಟ್ಟಿ ತಾಲೂಕಾ ಹೂಗಾರ ಸಮಾಜದ ಅಧ್ಯಕ್ಷ ಶರಣಪ್ಪ ಹೂಗಾರ ಹೇಳಿದರು.
ಅವರು ರವಿವಾರ ಪಟ್ಟಣದಲ್ಲಿ ಶಿವಶರಣ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಹೂಗಾರ ಬಂಧುಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದ್ದೇವೆ. ಇತರೆ ಸಮುದಾಯಗಳ ಜೊತೆ ಬೆಳೆದು ನಿಲ್ಲಲು ಸಂಘಟಿತ ಹೋರಾಟಕ್ಕೂ ಮುಂದಾಗುವ ಅನಿವಾರ್ಯತೆ ಬಂದೊದಗಿದೆ ಎಂದು ಸಲಹೆ ನೀಡಿದರು.
ಈ ವೇಳೆ ಹೊನ್ನಪ್ಪ ಪಲ್ಲೇದ ಮಾತನಾಡುತ್ತಾ, ಶಿವಶರಣ ಮಾದಯ್ಯನವರು ಕಾಯಕ ಯೋಗಿ ಆಗಿದ್ದರು. ಸೂರ್ಯ ಹುಟ್ಟುವ ಮುಂಚೆಯೇ ಹೂವುಗಳನ್ನು ಕಿತ್ತು ತಂದು ಕಲ್ಯಾಣದಲ್ಲಿರುವ ಶಿವಶರಣರಿಗೆ ಹಾಗೂ ಶಿವಶರಣೆಯರಿಗೆ ಕೊಡುತ್ತಿದ್ದರು. ಬಸವಣ್ಣನವರ ಕಲ್ಯಾಣದಲ್ಲಿ ಇವರ ಪಾತ್ರವು ಪ್ರಮುಖವಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಫಕ್ಕೀರಪ್ಪ ಹೂಗಾರ, ಕಾರ್ಯಾಧ್ಯಕ್ಷರು ಈರಣ್ಣ ಹೂಗಾರ. ಗುರುಪಾದಪ್ಪ ಹೂಗಾರ, ಮೌನೇಶ ಹೂಗಾರ, ಫಕ್ಕೀರಪ್ಪ ಹೂಗಾರ, ಶರಣಪ್ಪ ಈರಪ್ಪ ಹೂಗಾರ, ಶರಣು ಹೂಗಾರ, ಬಸವರಾಜ ಹೂಗಾರ, ಸಂಘಟನಾ ಕಾರ್ಯದರ್ಶಿ ಫಕ್ಕೀರೇಶ ಹೂಗಾರ, ರೂಪಾ ಹೂಗಾರ, ಮಹಾದೇವಪ್ಪ ತಿರಕಪ್ಪ ಹೂಗಾರ, ಬಸವಣ್ಣೆಪ್ಪ ಹೂಗಾರ, ಪ್ರಕಾಶ ಹೂಗಾರ, ಬಿ ಎಸ್. ಹೂಗಾರ, ಚನ್ನವೀರಯ್ಯ ಸಂಶಿಮಠ ಹಾಗೂ ಅನೇಕ ಸಮಾಜ ಬಾಂಧವರು ಇದ್ದರು.
Kshetra Samachara
07/09/2025 06:45 pm