", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/235762-1756651510-WhatsApp-Image-2025-08-31-at-7.09.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಗದಗ: ಜಿಲ್ಲೆಯಾದ್ಯಂತ ಗಣೇಶೋತ್ಸವ ಅಂಗವಾಗಿ ಐದು ದಿನಗಳವರೆಗೆ ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳನ್ನು ಭಾನುವಾರ ಸಡಗರ ಸಂಭ್ರಮದಿಂದ ವಿಸರ್ಜಿಸಲಾಯ...Read more" } ", "keywords": "Gadag Ganesh visarjan, Ganesh immersion Gadag, Gadag Ganesh festival farewell, Ganapati visarjan Gadag district, Ganesh idol immersion Gadag, Gadag Vinayaka visarjan, Ganesh visarjane Karnataka, Gadag Ganeshotsav farewell, Ganesh visarjan celebration Gadag, Gadag district Ganesh visarjan news", "url": "https://dashboard.publicnext.com/node" }
ಗದಗ: ಜಿಲ್ಲೆಯಾದ್ಯಂತ ಗಣೇಶೋತ್ಸವ ಅಂಗವಾಗಿ ಐದು ದಿನಗಳವರೆಗೆ ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳನ್ನು ಭಾನುವಾರ ಸಡಗರ ಸಂಭ್ರಮದಿಂದ ವಿಸರ್ಜಿಸಲಾಯಿತು.
ಅವಳಿ ನಗರ ಸೇರಿಂದತೆ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿಗಳು ಹಾಗೂ ಮನೆಯಲ್ಲಿರುವ ಗಣೇಶ ಮೂರ್ತಿಗಳನ್ನು ಮಧ್ಯಾಹ್ನದ ಪೂಜೆ ಬಳಿಕ ಎಲ್ಲೆಡೆ ಸಾಯಂಕಾಲ ಹೊತ್ತಿಗೆ ಟ್ಯಾಕ್ಸ್, ವಿವಿಧ ವಾಹನಗಳು, ಟ್ರಾö್ಯಕ್ಟರ್‌ನಲ್ಲಿ ಮೆರವಣಿಗೆ ಹೊರಡಿಸಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು, ಮಕ್ಕಳು ಡಿಜೆ ಸಂಗೀತದ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದರು. ಮಕ್ಕಳು ಪಟಾಕಿ ಸೌಂಡ್ ಮಾತ್ರ ಎಲ್ಲಡೇ ಕೇಳಿಸುತ್ತಿತ್ತು.
ಅವಳಿ ನಗರದಲ್ಲಿ ಕೆಲವು ಸಾರ್ವಜನಿಕ ಗಣೇಶ ಮೂರ್ತಿಗಳನ್ನು 9ನೇ ದಿನಕ್ಕೆ ವಿಸರ್ಜಿಸಲಾಗುತ್ತಿದೆ. ಕಳೆದ 5 ದಿನಗಳ ಹಿಂದೆ ಪ್ರತಿಷ್ಠಾಪಿಸಿ ನಿತ್ಯವೂ ನಾನಾ ಪೂಜೆಗಳ ಮೂಲಕ ವಿಘ್ನ ನಿವಾರಕ ಗಣೇಶನನ್ನು ಆರಾಸಿದ ಭಕ್ತರು ಸಾಯಂಕಾಲದಿಂದ ಗಣೇಶನನ್ನು ಕಳಿಸುವ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.
ಗಣೇಶ ಮೂರ್ತಿಯನ್ನು ಹೊತ್ತಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿಸರ್ಜನಾ ಸ್ಥಳಕ್ಕೆ ಗಣೇಶ ಮೂರ್ತಿಗಳನ್ನು ತರುವಾಗ ಯುವಕರು ಸಂತೋಷದಿಂದ ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆಗಳನ್ನು ಕೂಗಿದರು. ನಗರದ ನಗರಸಭೆಯಿಂದ ನಿರ್ಮಾಣ ಮಾಡಲಾಗಿರುವ ಕೃತಕ ಹೊಂಡದಲ್ಲಿ ಹಾಗೂ ಬೆಟಗೇರಿಯ ರೇಲ್ವೆ ಸೇತುವೆ ಬಳಿ ನಿರ್ಮಾಣ ಮಾಡಿರುವ ಕೃತಕ ಹೊಂಡದಲ್ಲಿ ಗಣೇಶನಿಗೆ ಭಕ್ತಿಪೂರ್ವಕ ವಿದಾಯ ಹೇಳಿದರು.
Kshetra Samachara
31/08/2025 08:15 pm