ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ- ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ

ಗದಗ: ಇಂದು ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಗದಗದ ಐತಿಹಾಸಿಕ ದೇವಸ್ಥಾನಗಳಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭ ಇಲ್ಲಿನ ತ್ರಿಕೂಟೇಶ್ವರ ದೇವಸ್ಥಾನ ಬಂದ್ ಇರೋದಿಲ್ಲ. ಎಂದಿನಂತೆ ಓಪನ್ ಇರಲಿದೆ. ಬೆಳಿಗ್ಗೆಯಿಂದ ಪೂಜಾ ಕೈಂಕರ್ಯಗಳು ನೆರವೇರಿದೆ.

ಗ್ರಹಣ ಸಂದರ್ಭದಲ್ಲಿ ನಿರಂತರ ಜಲಾಭಿಷೇಕ ಮಾತ್ರ ನಡೆಯಲಿದೆ. ಗ್ರಹಣ ಕಾಲದ ನಂತರ ಪುನಃ ಜಲಾಭೀಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಎಂದಿನಂತೆ ಭಕ್ತಾದಿಗಳಿಗೆ ಅವಕಾಶ ಇದೆ.

ಭಕ್ತಾದಿಗಳು ದೇವರ ದರ್ಶನ ಪಡೆದುಕೊಳ್ಳಬಹುದು. ಆದ್ರೆ, ಗ್ರಹಣ ಕಾಲದಲ್ಲಿ ದೇವರಿಗೆ ನಿರಂತರ ಜಲಾಭಿಷೇಕ ಇರುವುದರಿಂದ ಜನರಿಗೆ ಯಾವುದೇ ತೀರ್ಥ, ಪ್ರಸಾದ ವಿತರಣೆ ಇರುವುದಿಲ್ಲ. ಗ್ರಹಣ ಸಮಯ ರಾತ್ರಿ ವೇಳೆ ಇರುವುದರಿಂದ ಹೋಮ, ಹವನ ಇರುವುದಿಲ್ಲ. ಭಕ್ತರು ಜಪತಪ, ದೇವರ ಸ್ಮರಣೆ ಮಾಡಬಹುದು. ತಮ್ಮ ದೋಷ ನಿವಾರಣೆಗಾಗಿ ಗ್ರಹಣ ಕಾಲದಲ್ಲಿ ಸಂಕಲ್ಪ ಮಾಡಿ ಹರಕೆ ತೀರಿಸಬಹುದಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ

Edited By : Shivu K
PublicNext

PublicNext

07/09/2025 05:44 pm

Cinque Terre

24.59 K

Cinque Terre

0

ಸಂಬಂಧಿತ ಸುದ್ದಿ