ಗದಗ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀರವಿಶಂಕರ್ ಗುರೂಜಿ ಇಂದು ಗದಗ ನಗರದ ಅನೇಕ ಐತಿಹಾಸಿಕ ದೇವಸ್ಥಾನಗಳಿಗೆ ಭೇಟಿ ನೀಡಿದರು. ಶ್ರೀ ವೀರನಾರಾಯಣ, ಶ್ರೀ ತ್ರಿಕೂಟೇಶ್ವರ, ಸೂರ್ಯನಾರಾಯಣ, ಸರಸ್ವತಿ, ಗಾಯತ್ರಿ ಮತ್ತು ಸಾವಿತ್ರಿ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
“ಶಾಲೆಯಲ್ಲಿ ಓದುತ್ತಿದ್ದಾಗ ಗದುಗಿನ ಕುಮಾರವ್ಯಾಸ ಹಾಗೂ ವೀರನಾರಾಯಣರ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ನೇರವಾಗಿ ನೋಡಲು ಅವಕಾಶ ಸಿಕ್ಕಿದೆ. ಇದು ನಮ್ಮ ಪುರಾತನ ಸಂಸ್ಕೃತಿ, ನಾಡಿನ ಹೆಮ್ಮೆ. ಇಲ್ಲಿನ ಯುವಕರು ಹೆಚ್ಚಿನ ಕೌಶಲ್ಯಾಭಿವೃದ್ಧಿ ಹೊಂದಲಿ ಎಂದರು.
ಇದೇ ವೇಳೆ ಇಂದು ಸಂಭವಿಸಿರುವ ಚಂದ್ರಗ್ರಹಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. “ಗ್ರಹಣದ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಗ್ರಹಣ ಕಾಲವೇ ಅತ್ಯಂತ ಶ್ರೇಷ್ಠ ಸಮಯ. ಈ ಸಂದರ್ಭದಲ್ಲಿ ಧ್ಯಾನ, ಜಪ ಮಾಡಿದರೆ ಎಲ್ಲಾ ಶುಭ ಫಲಿತಾಂಶಗಳು ದೊರೆಯುತ್ತವೆ” ಎಂದರು.
ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.
PublicNext
07/09/2025 08:49 pm