", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/286525-1756379218-WhatsApp-Image-2025-08-28-at-4.36.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಗದಗ ನಗರದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್ ನಲ್ಲಿ ಗಣೇಶ್ ಹಬ್ಬ ಆಚರಣೆ ವಿಷಯಕ್ಕೆ ವಿದ್ಯಾರ್ಥಿಗಳು...Read more" } ", "keywords": "Gadag, Ganesh Visarjan, students, hostel warden, conflict, Ganesh festival, educational institution", "url": "https://dashboard.publicnext.com/node" }
ಗದಗ: ಗದಗ ನಗರದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್ ನಲ್ಲಿ ಗಣೇಶ್ ಹಬ್ಬ ಆಚರಣೆ ವಿಷಯಕ್ಕೆ ವಿದ್ಯಾರ್ಥಿಗಳು ಹಾಗೂ ವಾರ್ಡನ್ ನಡುವೆ ತಡರಾತ್ರಿ ಗಲಾಟೆಯಾಗಿದೆ.
ಹಾಸ್ಟೆಲ್ ನಲ್ಲಿ ಪ್ರತಿವರ್ಷ 3 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡಿ ನಂತರ ವಿಸರ್ಜನೆ ಮಾಡುತ್ತಿದ್ದರು. ಆದರೆ ವಾರ್ಡನ್ ರಿಯಾಜ್ ಅಗರಖೇಡ್ ಎಂಬುವರು ಈ ವರ್ಷ ಕೇವಲ 1 ದಿನದ ಮಾತ್ರ ಪರವಾನಿಗೆ ತಂದಿದ್ದಾರೆ. 1 ದಿನ ಬೇಡ, 3 ದಿನ ಗಣೇಶ್ ಕೂರಿಸೋಣ ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ವಾರ್ಡನ್ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದರು. ಮುಂದಾಳತ್ವ ವಹಿಸಿ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳದ್ದಾಗಿದೆ. ನಂತರ ಪೊಲೀಸರ ಭದ್ರತೆಯಲ್ಲಿ ಹಾಸ್ಟೆಲ್ ವಾರ್ಡನ್ ರಿಯಾಜ್ ಗಣೇಶ ವಿಸರ್ಜನೆ ಮಾಡಿ ಬಂದಿದ್ದಾರೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ ಗಣೇಶ ವಿಸರ್ಜನೆ ಮಾಡಿದ್ದಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಹಬ್ಬಗಳ ಆಚರಣೆಗೆ ವಾರ್ಡನ್ ವಿರೋಧ ಮಾಡ್ತಿದ್ದಾರೆ ಅಂತ ವಿದ್ಯಾರ್ಥಿಗಳ ಆರೋಪ ಮಾಡಿದರು. ನಂತರ ಸ್ಥಳಕ್ಕೆ ಗದಗ ಡಿವೈಎಸ್ಪಿ, ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಪರಸ್ಥಿತಿ ಪೊಲೀಸರು ತಿಳಿಗೊಳಿಸಿದರು. ಆದ್ರೆ ಹಾಸ್ಟೆಲ್ ವಾರ್ಡನ್ ರಾಜಕೀಯ ಮಾಡ್ತಾರೆ, ಜಾತಿ ನಿಂದನೆ ಮಾಡ್ತಾ, ಸಂಘಟಿಕರು ಹಾಗೂ ಪೊಲೀಸರಿಂದ ಹೆದರಿಸುವ ಕೆಲಸ ಮಾಡ್ತಿದ್ದಾರೆ. ಹಿಂದೂ ಹಬ್ಬಗಳ ಆಚರಣೆ ವಿರೋಧ ಮಾಡ್ತಿದ್ದಾರೆ ಅಂತ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
PublicNext
28/08/2025 04:37 pm