", "articleSection": "Business,Religion", "image": { "@type": "ImageObject", "url": "https://prod.cdn.publicnext.com/s3fs-public/52563-1756267726-WhatsApp-Image-2025-08-27-at-7.43.40-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ವಿಗ್ರಹ, ಹೂವು, ಹಣ್ಣು, ಪೂಜಾ...Read more" } ", "keywords": "Ganesh Chaturthi puja items, Ganesh idol, modak, durva grass, panchamrit, incense sticks, coconut, sindoor, red flowers, puja thali, ghee lamp, aarti plate, holy water, mango leaves, kalash, decorative items, rangoli colors, flower garlands, fruits, dry fruits, sweets, betel leaves, betel nuts, camphor, dhoop sticks, cotton wicks, matchbox, perfumed oil, red cloth, yellow cloth, sacred thread, jaggery"", "url": "https://dashboard.publicnext.com/node" } ಗಣೇಶ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಜೋರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಜೋರು

ಗದಗ: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳು, ಅಗತ್ಯ ವಸ್ತುಗಳ ಖರೀದಿ ಸಂಭ್ರಮ ಬುಧವಾರ ಜೋರಾಗಿತ್ತು. ಕಳೆದ ಎರಡೂ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡಲು ಜನ ಜಂಗುಳಿ ಹೆಚ್ಚಿತ್ತು.

ಮನೆ, ಸಾರ್ವತ್ರಿಕವಾಗಿ ಪ್ರತಿಷ್ಠ್ಠಾಪಿಸಲ್ಪಡುವ ಗಣೇಶೋತ್ಸವದ ಉಸ್ತುವಾರಿ ಹೊತ್ತಿರುವವರು ಲೆಕ್ಕ ಹಾಕದೇ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರು. ನಗರದ ಗ್ರೇನ್ ಮಾರುಕಟ್ಟೆ, ಬ್ಯಾಂಕ್ ರಸ್ತೆ, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತಗಳಲ್ಲಿ ಗಣೇಶ ಪೂಜೆ, ವೇದಿಕೆ ಅಲಂಕಾರಕ್ಕೆ ಅಗತ್ಯವಾದ ಬಾಳೆ ದಿಂಡುಗಳು, ಕಬ್ಬು, ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು, ನಾನಾ ತರದ ಹಣ್ಣುಗಳು, ಮಾವಿನ ತಳಿರು-ತೋರಣಗಳ ವಹಿವಾಟು ಜೋರಾಗಿದೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ!

ಅವಳಿ ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲು ಅಗತ್ಯ ತಯಾರಿ ನಡೆದಿದೆ. ಅವಳಿ ನಗರದಲ್ಲಿ ಒಟ್ಟು 150ಕ್ಕೂ ಹೆಚ್ಚು ವಿವಿಧ ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೊಳ್ಳಲಿವೆ. ಗಜಾನನ ಮಹಾಮಂಡಳಿಗಳು ತಮಗೆ ಬೇಕಾದ ಎತ್ತರ ಹಾಗೂ ಸನ್ನಿವೇಶಕ್ಕೆ ಹೊಂದಾಣಿಕೆ ಆಗುವ ಗಣೇಶನ ಮೂರ್ತಿ ತಯಾರಿಸಲು ಈಗಾಗಲೇ ಬೇರೆ-ಬೇರೆ ಮೂರ್ತಿ ತಯಾರಕರಿಗೆ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಗಣೇಶೋತ್ಸವಕ್ಕೆ ಗಣೇಶನನ್ನು ಬರಮಾಡಿಕೊಳ್ಳಲು ಮನೆ ಹಾಗೂ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ. ಗಣೇಶನಿಗೆ ವಿಶೇಷ ಮಂಟಪ, ದೀಪಾಲಂಕಾರ, ಮ್ಯೂಸಿಕ್ ಸಿಸ್ಟಮ್, ಬೃಹತ್ ಶ್ಯಾಮಿಯಾನ ಸೇರಿದಂತೆ ವಿವಿಧ ಅಲಂಕಾರಕ ವಸ್ತುಗಳಿಂದ ಸಿಂಗಾರ ಮಾಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

27/08/2025 09:38 am

Cinque Terre

19.92 K

Cinque Terre

0

ಸಂಬಂಧಿತ ಸುದ್ದಿ