", "articleSection": "Sports,Cinema", "image": { "@type": "ImageObject", "url": "https://prod.cdn.publicnext.com/s3fs-public/52563-1757255057-image-(14).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ: ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿಂದ ನಿವೃತ್ತಿ ಹೊಂದಲಿದ್ದಾರಾ ಎಂಬ ಚರ್ಚೆಗಳ ನಡುವೆ ಇದೀಗ ಮಾ...Read more" } ", "keywords": "MS Dhoni movie, The Chase teaser, Captain Cool acting debut, R Madhavan MS Dhoni film, action movie, Indian cricket team legend", "url": "https://dashboard.publicnext.com/node" }
ಮುಂಬೈ: ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿಂದ ನಿವೃತ್ತಿ ಹೊಂದಲಿದ್ದಾರಾ ಎಂಬ ಚರ್ಚೆಗಳ ನಡುವೆ ಇದೀಗ ಮಾಹಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಂ.ಎಸ್ ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಆರ್.ಮಾಧವನ್ ಜೊತೆ `ದಿ ಚೇಸ್’ ಸಿನಿಮಾದ ಆ್ಯಕ್ಷನ್ ಟೀಸರ್ ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ.
ಈ ಟೀಸರ್ ನೋಡಿದ ಧೋನಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದು ವಾಸನ್ ಬಾಲಾ ನಿರ್ದೇಶನದ ಚಿತ್ರದ ಟೀಸರ್ ನಲ್ಲಿ ಮಾಧವನ್ ಮತ್ತು ಧೋನಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧೋನಿ ಅಧಿಕಾರಿಯ ಪಾತ್ರದಲ್ಲಿ ಮಿಂಚಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈ ಟೀಸರ್ ನೋಡಿದ ಅಭಿಮಾನಿಗಳಿಗೆ ಇದು ಪೂರ್ಣ ಪ್ರಮಾಣದ ಸಿನಿಮಾನ ಅಥವಾ ಯಾವುದಾದರೂ ವೆಬ್ ಸೀರೀಸ್ ಇರಬಹುದಾ ಎಂಬುದರ ಬಗ್ಗೆ ಯಾವುದೇ ಕಲಾರಿತಿ ಸಿಕ್ಕಿಲ್ಲ. ಹೀಗಾಗಿ ಈ ಪ್ರಾಜೆಕ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇನ್ನು ಈ ಸಿನಿಮಾದಲ್ಲಿ ಧೋನಿ ಗೆಸ್ಟ್ ಅಪಿಯರೆನ್ಸ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಲಿದ್ದಾರೋ ಅಥವಾ ಸಂಪೂರ್ಣ ಸಿನಿಮಾದಲ್ಲಿ ಇರಲಿದ್ದಾರೋ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
PublicNext
07/09/2025 07:54 pm