ಕೊಚ್ಚಿ: ಸಾರ್ವಜನಿಕ ಬಸ್‍ನಲ್ಲಿ ಪ್ರಯಾಣಿಸುವಾಗ ಕಾಮನ್ ಸೆನ್ಸ್ ಕೂಡಾ ಬಹಳ ಮುಖ್ಯವಾಗತ್ತೆ. ಕೆಲವು ವಿಕೃತ ಪುರುಷರು ಮಹಿಳೆಯರಿಗೆ ಕಿರುಕುಳ ಕೊಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇದೀಗ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಬಸ್‍ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಯ ಎದೆಯನ್ನೇ ಪದೇ ಪದೇ ನೋಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ನೋಡುವ ದೃಷ್ಟಿ ಉಡುಗೆಯಲ್ಲಿಲ್ಲ, ನೋಡುವ ಕಣ್ಣಿನಲ್ಲಿದೆ ಎಂಬ ಮಾತು ಈಗ ವೈರಲ್ ಆಗಿರುವ ವಿಡಿಯೋದಿಂದ ಮತ್ತೆ ಸಾಬೀತಾಗಿದೆ. ಹೆಣ್ಮಕ್ಕಳು ಮಾಡರ್ನ್ ಉಡುಪು ತೊಡುತ್ತಾರೆ ಎಂದು ಕೋಪಗೊಳ್ಳುವ ಜನ ಈ ವಿಡಿಯೊವನ್ನು ನೋಡಲೇಬೇಕು. ಯಾಕೆಂದರೆ ಸಂಪ್ರದಾಯಬದ್ಧವಾಗಿ ಸೀರೆ ಧರಿಸಿದರೂ ಆ ವ್ಯಕ್ತಿ ಇಣುಕಿ ಇಣುಕಿ ನೋಡುವ ಪರಿ ಎಂಥವರಿಗಾದ್ರೂ ಇರಿಸುಮುರಿಸು ಆಗುತ್ತದೆ ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
PublicNext
07/09/2025 07:46 pm