ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಅಂತಾರಾಜ್ಯ ಕಳ್ಳರ ಬಂಧನ - ಚಿನ್ನಾಭರಣ ವಶಕ್ಕೆ

ದಾವಣಗೆರೆ : ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ದಾವಣಗೆರೆ ವಿದ್ಯಾ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಸುಮಾರು 15 ಲಕ್ಷ 37 ಸಾವಿರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಆಗಸ್ಟ್ 30ರಂದು ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದ ವಿದ್ಯಾನಗರ ನಿವಾಸಿ ರಂಗನಾಥ ಎಂಬುವರ ಮನೆಯ ಇಂಟರ್‌ಲಾಕ್ ಒಡೆದು ನುಗ್ಗಿ ಚಿನ್ನಾಭರಣ ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು‌‌‌.

ಸೆಪ್ಟೆಂಬರ್ ಒಂದರಂದು ಮನೆಗೆ ವಾಪಸ್ ಆದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ವಿದ್ಯಾನಗರ ಪೊಲೀಸ್ ಠಾಣೆಗೆ ಸೆಪ್ಟೆಂಬರ್ ಒಂದರಂದು ರಂಗನಾಥ ದೂರು ನೀಡಿದ್ದರು. ಪ್ರಕರಣದ ಪತ್ತೆಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್‌ರವರು ವಿದ್ಯಾನಗರ ಠಾಣೆ ಸಿಪಿಐ ಶಿಲ್ಪಾ ವೈ.ಎಸ್ ರವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು‌‌.‌

ಪ್ರಕರಣದ ಸಂಬಂಧ ಗುಜರಾತ್ ರಾಜ್ಯದ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಶ್ಯಾಮ್ ಸಿಂಗ್ (28) ಕವರ್ ಪಾಲ್(24) ಪ್ರತಾಪ್ ಸಿಂಗ್ (33) ಬಂಧಿಸಿದ್ದು, ಬಂಧಿತರಿಂದ 12 ಲಕ್ಷ 97 ಸಾವಿರದ 200 ರೂ ಮೌಲ್ಯದ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1 ಲಕ್ಷ 8 ಸಾವಿರ ಮೌಲ್ಯದ 1350 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 95 ಸಾವಿರದ 600 ರೂ. ಮೌಲ್ಯದ ನಗದು, 34 ಸಾವಿರ ರೂ ಬೆಲೆಯ 6 ಮೊಬೈಲ್ ಪೋನಗಳು, 3 ಸಾವಿರ ಬೆಲೆಯ ಎರಡು ವಾಚ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ ನಲ್ಲಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ.

ಅಂತಾರಾಜ್ಯ ಕಳ್ಳರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿಲ್ಪಾ ವೈ.ಎಸ್. ಪಿಎಸ್‌ಐ ರೂಪಾ ತೆಂಬದ್, ಸಿಬ್ಬಂದಿಗಳಾದ ಶಂಕರ ಆರ್ ಜಾಧವ, ಆನಂದ ಎಮ್, ಬೋಜಪ್ಪ, ಗೋಪಿನಾಥ ನಾಯ್ಕ, ಮಲ್ಲಿಕಾರ್ಜುನ ಚಂದ್ರಪ್ಪ, ಬಸವರಾಜ, ಸೀಮಾರವರ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ‌.

Edited By :
PublicNext

PublicNext

08/09/2025 12:54 pm

Cinque Terre

10.49 K

Cinque Terre

0