", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1757328830-musuku.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಂತೇಬೆನ್ನೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ತೋಟದ ಮನೆಗೆ ನುಗ್ಗಿದ ಐದು ಜನ ಮುಸುಕುಧಾರಿಗಳಿಂದ, ದಂಪತಿಯನ್ನು ಥಳ...Read more" } ", "keywords": "Davangere gold jewelry robbery, masked robbers in Davangere, jewelry theft case, Davangere crime news, robbery incident in Davangere, masked gang arrested, gold jewelry stolen.", "url": "https://dashboard.publicnext.com/node" } ದಾವಣಗೆರೆ : ಐದು ಜನ ಮುಸುಕುಧಾರಿಗಳಿಂದ : ಚಿನ್ನಾಭರಣ ದರೋಡೆ....!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಐದು ಜನ ಮುಸುಕುಧಾರಿಗಳಿಂದ : ಚಿನ್ನಾಭರಣ ದರೋಡೆ....!

ಸಂತೇಬೆನ್ನೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ತೋಟದ ಮನೆಗೆ ನುಗ್ಗಿದ ಐದು ಜನ ಮುಸುಕುಧಾರಿಗಳಿಂದ, ದಂಪತಿಯನ್ನು ಥಳಿಸಿ, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.

ನಿವೃತ್ತ ಶಿಕ್ಷಕ ಮಾದಪ್ಪ ಹಾಗೂ ಅವರ ಪತ್ನಿ ಇಬ್ಬರೇ ಮನೆಯಲ್ಲಿ ಇರುವ ಸಮಯ ನೋಡಿಕೊಂಡು ಕಳ್ಳರು ಹೊಂಚು ಹಾಕಿದ್ದಾರೆ. ರಾತ್ರಿ ಮನೆಗೆ ಬರಬೇಕಿದ್ದ ತಮ್ಮ ಪುತ್ರನಿಗಾಗಿ, ಕಾಯುತ್ತಿದ್ದ ದಂಪತಿಗಳು, ಮಗ ಬರುವುದಕ್ಕೂ ಮುನ್ನ ಏಕಾಏಕಿ ನುಗ್ಗಿದ ದರೋಡೆಕೋರರು ಚಾಕು ಹಿಡಿದು ದಂಪತಿಯನ್ನು ಬೆದರಿಸಿದರು.

ಮಾದಪ್ಪ ಅವರ ಕೈಕಾಲು ಕಟ್ಟಿಹಾಕಿದ್ದಾರೆ. ಅಡುಗೆ ಮನೆಯಲ್ಲಿದ್ದ ಸಾವಿತ್ರಮ್ಮ ಅವರಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಬೆದರಿಸಿ, ಅವರ ಮೈಮೇಲಿದ್ದ ಚಿನ್ನದ ಆಭರಣ ಕಸಿದುಕೊಂಡಿದ್ದಾರೆ. ನಂತರ ಅವರನ್ನೂ ಥಳಿಸಿ, ಕೈಕಾಲು ಕಟ್ಟಿದ್ದಾರೆ.

ಸಾವಿತ್ರಮ್ಮನ ಮೈ ಮೇಲಿದ್ದ ಮಾಂಗಲ್ಯ ಸರ್, ಕಿವಿ ಓಲೆ, ಕಾಲುಂಗುರ ಸೇರಿದಂತೆ ಮುಂದಿನ ತಿಂಗಳು ಮಗನ ಮದುವೆ ಹಿನ್ನೆಲೆ ಮಾಡಿಸಿದ್ದ 10 ತೊಲೆ ಬಂಗಾರ, 1 ಕೆಜಿ ಬೆಳ್ಳಿ ಒಡವೆ ಸಾಮಗ್ರಿಗಳನ್ನು ದರೋಡೆ ಮಾಡಿದ್ದಾರೆ.

ಸ್ಥಳಕ್ಕೆ ಸಂತೆಬೆನ್ನೂರು ಠಾಣೆಯ ಪೊಲೀಸರು, ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ, ಬೆರಳಚ್ಚು ತಜ್ಞರು ಪೊಲೀಸ್ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದರೋಡೆ ಗ್ಯಾಂಗ್ ಬಂಧನಕ್ಕೆ ತಂಡ ರಚನೆ ಮಾಡಿದ ಎಸ್ಪಿ ಉಮಾ ಪ್ರಶಾಂತ್ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vinayak Patil
PublicNext

PublicNext

08/09/2025 04:23 pm

Cinque Terre

10.4 K

Cinque Terre

0