", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/229640-1757316894-tmk1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ಮಾಸಿಕ ಜೀವನಾಂಶ ಕೊಡುವಂತೆ ನ್ಯಾಯಾಲಯದ ಆದೇಶವಾಗಿದ್ದರೂ ಮಕ್ಕಳು ಕೊಡದೆ ನಿರ್ಲಕ್ಷ್ಯ ವಹಿಸಿದ್ದ ವೃದ್ಧರ ಮನೆಗೆ ತುಮಕೂರು ಉಪವಿಭಾಗಾಧ...Read more" } ", "keywords": "tumkur tahsildar meets elderly, tumkur subdivision officer listens problems, tumkur public appreciation news, tumkur officer meets senior citizens, tumkur administration public praise, tumkur elderly issues addressed, subdivision officer tumkur visit, tumkur government officer interaction, tumkur elderly welfare news, tumkur public service appreciation", "url": "https://dashboard.publicnext.com/node" } ತುಮಕೂರು: ವೃದ್ಧರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿಗಳು - ಸಾರ್ವಜನಿಕ ವಲಯದಲ್ಲಿ ಪ್ರಶಂಸೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ವೃದ್ಧರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿಗಳು - ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ತುಮಕೂರು: ಮಾಸಿಕ ಜೀವನಾಂಶ ಕೊಡುವಂತೆ ನ್ಯಾಯಾಲಯದ ಆದೇಶವಾಗಿದ್ದರೂ ಮಕ್ಕಳು ಕೊಡದೆ ನಿರ್ಲಕ್ಷ್ಯ ವಹಿಸಿದ್ದ ವೃದ್ಧರ ಮನೆಗೆ ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ಭೇಟಿ ನೀಡಿಸಮಸ್ಯೆ ಆಲಿಸಿದರು.

ಮಕ್ಕಳಿಂದ ಜೀವನಾಂಶ ಕೋರಿ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2007ರ ಅಡಿ ಪ್ರಕರಣ ದಾಖಲಿಸಿದ್ದ ಹಿರಿಯರ ಮನೆಗೆ ತುಮಕೂರು ಉಪವಿಭಾಗಾಧಿಕಾರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ವೀಕ್ಷಿಸಿ ವೃದ್ಧರ ಯೋಗ ಕ್ಷೇಮ ವಿಚಾರಿಸಿದರು.

ತುಮಕೂರು ತಾಲ್ಲೂಕು ಕೋರ ಹೋಬಳಿ ಮುದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮುದ್ದಯ್ಯ ಎಂಬ 90 ವರ್ಷದ ಹಿರಿಯ ನಾಗರಿಕರ ಸಮಸ್ಯೆಯನ್ನು ಆಲಿಸಿದರು. ನಾಲ್ಕು ಜನ ಗಂಡು ಮಕ್ಕಳಿದ್ದು ತಮ್ಮನ್ನು ಪಾಲನೆಯ ಪೋಷಣೆ ಮಾಡುತ್ತಿಲ್ಲ. ಈಗಾಗಲೇ ನ್ಯಾಯಾಲಯದಿಂದ ಮಾಸಿಕ 2000 ರೂಗಳಂತೆ ಮಾಸಿಕ ಜೀವನಾಂಶ ಕೊಡಲು ಆದೇಶವಾಗಿದ್ದರೂ ಮಕ್ಕಳು ಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನನ್ನ ಜಮೀನು ಎಂಟು ಭಾಗ ಮಾಡಿಸಿಕೊಡಿ ಎಂದು ಮುದ್ದಯ್ಯ ಉಪವಿಭಾಗಾಧಿಕಾರಿಗಳಲ್ಲಿ ಮನವಿ ಮಾಡಿದರು.

ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿಗಳು ನಿಯಮದಂತೆ ಭಾಗಾಂಶದ ಪ್ರಕ್ರಿಯೆ ಮಾಡುವುದಾಗಿ ಭರವಸೆ ನೀಡಿದರು.

ನಾಹಿದಾ ಜಮ್ ಜಮ್ ಅವರು ತುಮಕೂರು ಉಪ ವಿಭಾಗ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ತುಮಕೂರು ಜಿಲ್ಲೆ ಹಿರಿಯ ನಾಗರಿಕರ ಮನೆಗಳಿಗೆ ಖುದ್ದಾಗಿ ಭೇಟಿ ಮಾಡಿ ಅವರ ಸಮಸ್ಯೆ ಆಲಿಸುತ್ತಿರುವ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

Edited By : Manjunath H D
PublicNext

PublicNext

08/09/2025 01:06 pm

Cinque Terre

15.06 K

Cinque Terre

0