", "articleSection": "Law and Order,Government,Religion", "image": { "@type": "ImageObject", "url": "https://prod.cdn.publicnext.com/s3fs-public/387839-1757322604-Untitled-design---2025-09-08T144413.189.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಮದ್ದೂರು ಪಟ್ಟಣದಲ್ಲಿ ನಾಳೆ (ಮಂಗಳವಾರ) ಸ್ವಯಂಪ್ರೇರಿತ ಬಂದ್ ಜರುಗಲಿದೆ. ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ವಿರು...Read more" } ", "keywords": "maddur voluntary bandh, hindu leaders call, karnataka bandh news, hindu protest, maddur news today, karnataka politics, hindu organizations bandh, latest news maddur, bandh tomorrow, hindu leaders maddur", "url": "https://dashboard.publicnext.com/node" }
ಮಂಡ್ಯ: ಮದ್ದೂರು ಪಟ್ಟಣದಲ್ಲಿ ನಾಳೆ (ಮಂಗಳವಾರ) ಸ್ವಯಂಪ್ರೇರಿತ ಬಂದ್ ಜರುಗಲಿದೆ. ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ವಿರುದ್ಧವಾಗಿ ಹಿಂದೂ ಮುಖಂಡರು ಬಂದ್‌ಗೆ ಕರೆ ನೀಡಿದ್ದಾರೆ.
ಹಿಂದೂ ಸಂಘಟನೆಗಳ ನಾಯಕರು ಬುಧವಾರ ಮದ್ದೂರು ತಾಲೂಕಿನ ಎಲ್ಲಾ ಗಣೇಶ ಮೂರ್ತಿಗಳನ್ನು ಪಟ್ಟಣಕ್ಕೆ ತಂದು ಡಿಜೆ ಸಹಿತ ಸಾಮೂಹಿಕ ಮೆರವಣಿಗೆ ಮೂಲಕ ವಿಸರ್ಜನೆ ನಡೆಸುವ ನಿರ್ಧಾರ ಮಾಡಿದ್ದಾರೆ.
ಕಲ್ಲು ತೂರಾಟದಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದು ಪೂರ್ವ ಯೋಜಿತ ದಾಳಿ ಎಂದು ಆರೋಪಿಸಿರುವ ಹಿಂದೂ ಮುಖಂಡರು, ಮಸೀದಿ ಭಾಗದಿಂದ ಕಲ್ಲು ತೂರಾಟ ನಡೆದಿದೆ ಎಂದು ದೂರಿದ್ದಾರೆ. ಧರ್ಮಗುರು ಬಂಧನ ಹಾಗೂ ಮಸೀದಿ ಸೀಜ್ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈಗಾಗಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮಂಡ್ಯ, ಬೆಂಗಳೂರು, ಮೈಸೂರು, ಹಾಸನ, ರಾಮನಗರ ಹಾಗೂ ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ಪಡೆಗಳನ್ನು ಕಳುಹಿಸಲಾಗಿದೆ.
PublicNext
08/09/2025 02:40 pm