ಭೋಪಾಲ್: ಪೊಲೀಸ್ ಕಾನ್ಸ್‌ಟೇಬಲ್ ಜನ್ಮ ದಿನ ಆಚರಣೆ ವೇಳೆ ಅರೆಬೆತ್ತಲೆ ಮಹಿಳೆಯರೊಂದಿಗೆ ಡ್ಯಾನ್ಸ್ ಮಾಡಿದ ಎಎಸ್‌ಐ ಹಾಗೂ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ. ಎಸ್‌ಐ ಸಂಜೀವ ಗೌಡ್ ಹಾಗೂ ಕಾನ್ಸ್‌ಟೇಬಲ್ ರಾಹುಲ್ ಬೌದ್ ಎಂಬಾತರೇ ಅಮಾನತಿಗೆ ಒಳಗಾದವರು.
ಮಧ್ಯಪ್ರದೇಶದ ಡಾಟಿಯಾ ಜಿಲ್ಲಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ರಾಹುಲ್ ಬೌದ್ ಜನ್ಮದಿನ ಆಚರಣೆ ವೇಳೆ ಇಬ್ಬರು ಪೊಲೀಸರು ಬಾರ್ ನರ್ತಕಿಯರೊಂದಿಗೆ ಅಶ್ಲೀಲ ಭಂಗಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ನಂತರ ಡಾಟಿಯಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೂರಜ್ ವರ್ಮಾ ಅಮಾನತು ಆದೇಶ ನೀಡಿದ್ದಾರೆ. ಪೊಲೀಸ್ ಇಲಾಖೆ ಎಂದೆಂದೂ ಈ ರೀತಿಯ ಅಶಿಸ್ತು ಹಾಗೂ ಅಶ್ಲೀಲ ವರ್ತನೆಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
PublicNext
09/09/2025 05:26 pm