ಬೆಂಗಳೂರು : ಮಲ್ಲಿಗೆ ಹೂವು ಮೂಡಿದಿದ್ದಕ್ಕೆ ಮಲಯಾಳಂ ನಟಿ ನವ್ಯಾ ನಾಯರ್ ಅವರು ಲಕ್ಷ ಲಕ್ಷ ಫೈನ್ ಕಟ್ಟಿದ್ದಾರೆ. ಹೌದು ಇತ್ತೀಚೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಲ್ಲಿಗೆ ಹೂವುಗಳನ್ನು ಕೊಂಡೊಯ್ದಿದ್ದಕ್ಕಾಗಿ 1.14 ಲಕ್ಷ ರೂ. (ಸುಮಾರು 1,980 ಆಸ್ಟ್ರೇಲಿಯನ್ ಡಾಲರ್) ದಂಡ ತೆರಬೇಕಾಯಿತು.
ಅವರು ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ ಆಯೋಜಿಸಿದ್ದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಿದ್ದರು. ಅವರ ತಂದೆ ಅವರಿಗೆ ಉಡುಗೊರೆಯಾಗಿ ನೀಡಿದ್ದ ಸುಮಾರು 15 ಸೆಂ.ಮೀ. ಉದ್ದದ ಮಲ್ಲಿಗೆ ಹೂವಿನ ಎಳೆಯನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.
ಆಸ್ಟ್ರೇಲಿಯಾದಲ್ಲಿ ಜೈವಿಕ ಸುರಕ್ಷತೆಯ ನಿಯಮಗಳು ಬಹಳ ಕಠಿಣವಾಗಿದ್ದು, ವಿದೇಶಿ ಸಸ್ಯಗಳು ಮತ್ತು ಹೂವುಗಳನ್ನು ದೇಶದೊಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮದ ಬಗ್ಗೆ ಅವರಿಗೆ ಅರಿವಿರಲಿಲ್ಲ ಎಂದು ನವ್ಯಾ ನಾಯರ್ ಹೇಳಿದ್ದಾರೆ. ಆದರೂ, "ಅಜ್ಞಾನವು ಕ್ಷಮಾರ್ಹವಲ್ಲ" ಎಂದು ಒಪ್ಪಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಇದನ್ನು ಪತ್ತೆಹಚ್ಚಿದ ನಂತರ ಅವರಿಗೆ ದಂಡ ವಿಧಿಸಿದ್ದಾರೆ.
PublicNext
09/09/2025 04:24 pm