ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಕಮಲ್ ಶ್ರೀದೇವಿ" ಟ್ರೈಲರ್ ಭವ್ಯ ಬಿಡುಗಡೆ – ಪ್ರೇಕ್ಷಕರಲ್ಲಿ ಹೆಚ್ಚಿದ ನಿರೀಕ್ಷೆ!

ಬೆಂಗಳೂರು : ಶ್ರೀ ಎನ್. ಚಲುವರಾಯಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್‌ನಲ್ಲಿ ಬಿ. ಕೆ. ಧನಲಕ್ಷ್ಮಿ ನಿರ್ಮಾಣ, Barnswallow Companyಯ ರಾಜವರ್ಧನ್ ಸಹನಿರ್ಮಾಣದಲ್ಲಿ ಮೂಡಿ ಬಂದಿರುವ “ಕಮಲ್ ಶ್ರೀದೇವಿ” ಚಿತ್ರದ ಟ್ರೈಲರ್ ಬಿಡುಗಡೆಯ ಭವ್ಯ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಚಿತ್ರದಲ್ಲಿ ಪ್ರತಿಭಾವಂತ ನಟ ಸಚಿನ್ ಚಲುವರಾಯಸ್ವಾಮಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಿಶೋರ್, ರಮೇಶ್ ಇಂದಿರಾ, ಸಂಗೀತ ಭಟ್, ರಾಜವರ್ಧನ್, ಅಕ್ಷಿತಾ ಬೋಪಯ್ಯ ಸೇರಿದಂತೆ ಹಲವಾರು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.

ಸಮಾರಂಭದಲ್ಲಿ ಇಡೀ ಚಿತ್ರತಂಡ ಭಾಗವಹಿಸಿದ್ದು, ಸಿನಿಮಾ ಕುರಿತ ಉತ್ಸಾಹವನ್ನು ಪ್ರೇಕ್ಷಕರಲ್ಲಿ ಹೆಚ್ಚಿಸಿದೆ. ಭಾವನೆ, ಮನರಂಜನೆ ಹಾಗೂ ಸಸ್ಪೆನ್ಸ್ ನೊಂದಿಗೆ ಮೂಡಿ ಬಂದಿರುವ ಈ ಚಿತ್ರ ಟ್ರೈಲರ್ ಈಗಾಗಲೇ ಚರ್ಚೆಗೆ ಕಾರಣವಾಗಿದೆ. ಪ್ರತಿಭಾವಂತ ತಂಡ, ಸಶಕ್ತ ಕಥಾಹಂದರ ಹಾಗೂ ವಿಭಿನ್ನ ನಿರ್ಮಾಣ ಶೈಲಿ “ಕಮಲ್ ಶ್ರೀದೇವಿ” ಚಿತ್ರವನ್ನು ಪ್ರೇಕ್ಷಕರ ಮನ ಗೆಲ್ಲುವಂತಹ ನಿರೀಕ್ಷೆ ಮೂಡಿಸಿದೆ.

Edited By : Suman K
PublicNext

PublicNext

09/09/2025 05:52 pm

Cinque Terre

31.91 K

Cinque Terre

0

ಸಂಬಂಧಿತ ಸುದ್ದಿ