ಶಿವಮೊಗ್ಗ: ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ, ಹುಟ್ಟುತ್ತೇನೆ ಎಂಬ ಭದ್ರಾವತಿ ಶಾಸಕ ಸಂಗಮೇಶ್ವರ್ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಾಬರಿಗಾದ್ರೂ ಹುಟ್ಟಲಿ, ಅವರು ಯಾರಿಗಾದ್ರೂ ಹುಟ್ಟಲಿ. ಅವರು ಯಾರಿಗೆ ಹುಟ್ಟಿದ್ದಾರೋ ನನಗಂತೂ ಗೊತ್ತಿಲ್ಲ ಎಂದು ವಿವಾದ್ಮಾತ್ಮಕ ಹೇಳಿದ್ದಾರೆ.
ಮಂಡ್ಯದ ಹೆಣ್ಣು ಮಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ನಾಲ್ಕೈದು ಜನ ಮುಸ್ಲಿಮರನ್ನು ಬಂಧನ ಮಾಡಿದರೆ ಸಾಕಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಗಂಡುಗಲಿ ರೀತಿ ನಿರ್ಧಾರ ಕೈಗೊಳ್ಳಬೇಕಿತ್ತು. ಸಿಎಂ ಹಾಗೂ ಗೃಹಸಚಿವರು ಇವರು ಮುಸ್ಲಿಮರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
PublicNext
09/09/2025 07:48 pm