ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಾನು ಸತ್ತಿಲ್ಲ ಕ್ಷೇಮವಾಗಿದ್ದೇನೆ '...ಸಾವಿನ ಸುದ್ದಿ ಬಗ್ಗೆ ನಟಿ ಕಾಜಲ್ ಸ್ಪಷ್ಟನೆ

ನಟಿ ಕಾಜಲ್ ಅಗರ್ವಾಲ್ ತನಗೆ ಅಪಘಾತವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಬ್ಬುತ್ತಿರುವ ಪ್ರಚಾರವನ್ನು ನಿರಾಕರಿಸಿದ್ದಾರೆ. ಅಂತಹ ಸುಳ್ಳು ಪ್ರಚಾರಗಳು ತಮಾಷೆಯಾಗಿವೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ಅಪಘಾತಕ್ಕೀಡಾಗಿದ್ದೇನೆ ಎನ್ನುವ ಕೆಲವು ಆಧಾರರಹಿತ ಸುದ್ದಿಗಳು ನನಗೆ ಬಂದಿವೆ (ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ!). ನಿಜ ಹೇಳಬೇಕೆಂದರೆ, ಇದು ತುಂಬಾ ತಮಾಷೆಯಾಗಿರುವ ಸುದ್ದಿಯಾಗಿದೆ, ಏಕೆಂದರೆ ಅದು ಸುಳ್ಳು. ದೇವರ ದಯೆಯಿಂದ, ನಾನು ಕ್ಷೇಮವಾಗಿದ್ದೇನೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಕೇಳಿಕೊಳ್ಳುತ್ತೇನೆ. ಸಕಾರಾತ್ಮಕ ಚಿಂತನೆ ಮತ್ತು ಸತ್ಯದ ಮೇಲೆ ಗಮನಹರಿಸೋಣ’ ಎಂದು ಬರೆದುಕೊಂಡಿದ್ದಾರೆ.

ಸುಳ್ಳು ಸುದ್ದಿ

ನಟಿ ಕಾಜಲ್‌ ಅವರಿಗೆ ಭೀಕರ ಅಪಘಾತವಾಗಿದೆ. ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಅನೇಕರು ಸಂತಾಪವನ್ನೂ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದ ನಟಿ ಸ್ಪಷ್ಟನೆ ನೀಡಿ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

09/09/2025 04:20 pm

Cinque Terre

12.16 K

Cinque Terre

0