", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/286525-1757327105-WhatsApp-Image-2025-09-08-at-3.54.58-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Purashottama Surapur" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಾದಗಿರಿ: ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ ರಾಜ್ಯ ಚುನಾವಣಾ ಆಯೋಗವೇ ಸ್ವಾಗತಿಸಿದೆ. ಆದರೆ ಬಿಜೆಪಿಯವರು ವಿರೋಧ ಮಾಡುತ್ತಿರುವುದು ಯಾ...Read more" } ", "keywords": "Karnataka ballot paper usage, election commission welcome, Sharanabasappa Darshanapur, local body elections, EVM vs ballot paper, Congress party decision, BJP reaction, Karnataka government, state elections, voting system change ", "url": "https://dashboard.publicnext.com/node" }
ಯಾದಗಿರಿ: ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ ರಾಜ್ಯ ಚುನಾವಣಾ ಆಯೋಗವೇ ಸ್ವಾಗತಿಸಿದೆ. ಆದರೆ ಬಿಜೆಪಿಯವರು ವಿರೋಧ ಮಾಡುತ್ತಿರುವುದು ಯಾಕೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
1.5 ಇವಿಎಂಗಳು ರಾಜ್ಯದಲ್ಲಿ ಕೆಟ್ಟಿವೆ. ಕೆಟ್ಟ ಇವಿಎಂಗಳ ಮೂಲಕ ಚುನಾವಣೆ ಮಾಡಲು ಸಾಧ್ಯವೇ? ಕನಿಷ್ಠ ಇವಿಎಂಗಳನ್ನು ರಿಪ್ಲೇಸ್ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದು ಕರೆಕ್ಟ್ ಎಂದು ಸಚಿವ ಹೇಳಿದರು.
ಇನ್ನು ಶಾಸಕ ಬಿ ಆರ್ ಪಾಟೀಲ್ ಮತಗಳ್ಳತನ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ದರ್ಶನಾಪುರ್ ಅವರು, 'ಬಿ ಆರ್ ಪಾಟೀಲ್ ಅವರು ಸಾಕ್ಷಿ ಸಮೇತ ಆರೋಪ ಮಾಡಿದ್ದಾರೆ. ಅವರ ಮತಕ್ಷೇತ್ರದಲ್ಲಿ 6900 ಮತಗಳನ್ನು ಡಿಲೀಟ್ ಮಾಡಲು ಮೊಬೈಲ್ ಮೂಲಕ ಸಂದೇಶ ಕಳಿಸಿದ್ದಾರೆಂದು. ಬಿ ಆರ್ ಪಾಟೀಲ್ ಗಲಾಟೆ ಮಾಡಿ ಅಕ್ರಮ ನಿಲ್ಲಿಸಿದ್ದಾರೆ ಎಂದರು.
2018ರಲ್ಲಿ ಸುರಪುರ ಮತಕ್ಷೇತ್ರದಲ್ಲಿ ಸುಮಾರು 30 ಸಾವಿರ ಅಕ್ರಮ ಮತಗಳು ಸೇರ್ಪಡೆಯಾಗಿದ್ದವು. 2023ರ ಚುನಾವಣೆಯಲ್ಲಿ 28 ಸಾವಿರ ಮತಗಳು ಡಿಲೀಟ್ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ ನಾವೇನು ಚೆಕ್ ಮಾಡಿಸಲು ಹೋಗಿಲ್ಲ, ನಾನು ಒಳ್ಳೆ ಲೀಡ್ ಮೇಲೆ ಗೆದ್ದು ಬಂದಿದ್ದೇನೆ ಎಂದು ನಸು ನಕ್ಕರು.
PublicNext
08/09/2025 03:58 pm