", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1757333326-WhatsApp-Image-2025-09-08-at-5.38.18-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : 15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಆ ಯುವತಿ ಇದೇ ತಿಂಗಳು ಮದುವೆಯಾಗಬೇಕಿತ್ತು. ಖಾಸ...Read more" } ", "keywords": "Shivamogga road accident, young woman death, bride-to-be fatal accident, terrible accident Shivamogga, road safety issues, Karnataka accident news, traffic accident updates, fatal road accidents in Shivamogga, accident prevention measures", "url": "https://dashboard.publicnext.com/node" } ಶಿವಮೊಗ್ಗ: ಭೀಕರ ಅಪಘಾತದಲ್ಲಿ ಯುವತಿ ದುರ್ಮರಣ, ಮದುವೆಯಾಗಬೇಕಿದ್ದ ಯುವತಿ ತೆರಳಿದ್ದು ಬಾರದ ಲೋಕಕ್ಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಭೀಕರ ಅಪಘಾತದಲ್ಲಿ ಯುವತಿ ದುರ್ಮರಣ, ಮದುವೆಯಾಗಬೇಕಿದ್ದ ಯುವತಿ ತೆರಳಿದ್ದು ಬಾರದ ಲೋಕಕ್ಕೆ

ಶಿವಮೊಗ್ಗ : 15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಆ ಯುವತಿ ಇದೇ ತಿಂಗಳು ಮದುವೆಯಾಗಬೇಕಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈ ಯುವತಿ, ಇಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಇಂದೇ ತನ್ನ ಭಾವಿ ಪತಿಯೊಂದಿಗೆ ಫೋಟೋ ಶೂಟ್ ಗೆ ತೆರಳಬೇಕಿತ್ತು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು....

ಅಷ್ಟಕ್ಕೂ ಸೆಪ್ಟೆಂಬರ್ 24 ರಂದು ಮದುವೆಯಾಗಬೇಕಿದ್ದ ಈ ಯುವತಿ ಹೆಸರು ಕವಿತಾ‌ ಬಾಯಿ (26) ಅಂತಾ. ಇಂದು ತಾನು ರೇಡಿಯಾಲಜಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಫೋಟೋ ಶೂಟ್ ಗೆ ತೆರಳಬೇಕಿತ್ತು. ಆದರೆ ಶಿವಮೊಗ್ಗ ಹೊರವಲಯದ ದುಮ್ಮಳ್ಳಿ ಕ್ರಾಸ್ ನ ಸಕ್ಕರೆ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದ್ದು, ಟಿವಿಎಸ್ ಮತ್ತು ಪಲ್ಸರ್ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಸಹೋದರ ಸಂತೋಷನ ಜೊತೆ ಪಲ್ಸರ್ ಬೈಕ್ ನಲ್ಲಿ ಹೊರಟಿದ್ದ ಕವಿತಾ ಬಾಯಿ ಬೈಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಅದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಸಿಟಿ ಬಸ್, ಬೈಕ್ ನಿಂದ ಕೆಳಕ್ಕೆ ಬಿದ್ದ ಕವಿತಾ ಮೇಲೆ ಹರಿದಿದೆ. ಈ ವೇಳೆ ಸ್ಥಳದಲ್ಲೇ ಕವಿತಾ ಸಾವನ್ನಪ್ಪಿದ್ದರೆ, ಬೈಕ್ ಓಡಿಸುತ್ತಿದ್ದ ಸಹೋದರನಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಅಷ್ಟಕ್ಕೂ ಇದೇ ತಿಂಗಳು ಸೆಪ್ಟೆಂಬರ್‌ 24 ಮತ್ತು 25 ರಂದು ಕವಿತಾ ಮದುವೆ ನಿಶ್ಚಯವಾಗಿತ್ತು. ಅಷ್ಟರಲ್ಲಿ ಇಂತಹದ್ದೊಂದು ಘೋರ ದುರಂತ ನಡೆದು ಹೋಗಿದೆ. ಇನ್ನು ಇತ್ತ ಶವಾಗಾರದ ಮುಂಭಾಗ ಯುವತಿ ಕುಟುಂಬಸ್ಥರು ಮಗಳನ್ನ ನೆನೆದು ಕಣ್ಣೀರಿಟ್ಟರು.

ಒಟ್ಟಾರೆ, ವಿಧಿಯಾಟವೋ ಎಂಬಂತೆ ಹಸೆಮಣೆ ಏರಿ ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ಕವಿತಾ ಬಾಯಿ ಬಾರದ ಲೋಕಕ್ಕೆ ಪಯಣಿಸಿರುವುದು ದುರಂತವೇ ಸರಿ.

ವೀರೇಶ್‌ ಜಿ ಹೊಸೂರ್‌, ಪಬ್ಲಿಕ್‌ ನೆಕ್ಟ್ಸ್‌ ಶಿವಮೊಗ್ಗ...

Edited By : Shivu K
PublicNext

PublicNext

08/09/2025 05:41 pm

Cinque Terre

7.19 K

Cinque Terre

0

ಸಂಬಂಧಿತ ಸುದ್ದಿ