", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/40083620250908063222filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ: 18 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಧರಿಸುತ್ತಿರುವುದು ಸೇರಿದಂತೆ ಪೋಕ್ಸೋ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದರಿಂದ ಉ...Read more" } ", "keywords": "Awareness programs for teenage girls on reproductive health and pregnancy ", "url": "https://dashboard.publicnext.com/node" } ಶಿವಮೊಗ್ಗ: ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಸಮಸ್ಯೆ ಕುರಿತು ಸಂವಾದ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಸಮಸ್ಯೆ ಕುರಿತು ಸಂವಾದ

ಶಿವಮೊಗ್ಗ: 18 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಧರಿಸುತ್ತಿರುವುದು ಸೇರಿದಂತೆ ಪೋಕ್ಸೋ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದರಿಂದ ಉಂಟಾಗುವ ಸಮಸ್ಯೆಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಸ್ತ್ರೀರೋಗ ತಜ್ಞೆ ಡಾ. ಚಂದುಶ್ರೀ ವಿದ್ಯಾರ್ಥಿಗಳಿಗೆ ಸಮಗ್ರವಾಗಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಗುರುವಾರ ‘ಇಗ್ಲೆಂಟ್ ಮೈಂಡ್ ಅಂಡ್ ಇಗ್ಲೆಂಟ್ ಪಾಸಿಟಿವ್’ ಎಂಬ ಘೋಷವಾಕ್ಯದಡಿ ‘ಇನ್ಸ್‌ಪೈರ್’ ಆನ್‌ಲೈನ್ ಪೋಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಡಾ. ಚಂದುಶ್ರೀ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಸಮಸ್ಯೆಗಳು, ರಕ್ತ ಹೀನತೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅವರು ವಿವರಿಸಿದರು.

ಆಹಾರ ಪದ್ಧತಿ ಸಮಸ್ಯೆಗಳು, ಗ್ಯಾಸ್ಟಿಕ್, ಥೈರಾಯ್ಡ್, ಯೂರಿನ್ ಇನ್ಫೆಕ್ಷನ್, ಬಿಳಿಮುಟ್ಟು, ತಲೆ ಕೂದಲು ಉದುರುವಿಕೆ ಹಾಗೂ ಅಪಾಯಕಾರಿ ಲೈಂಗಿಕ ಚಟುವಟಿಕೆಗಳಿಗೆ ಪ್ರಚೋದಿಸುವ ಕಾರಣಗಳು, ಅವನ್ನು ತಡೆಗಟ್ಟುವ ಮಾರ್ಗಗಳು ಮತ್ತು ಉಂಟಾಗಬಹುದಾದ ಅಪಾಯಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

08/09/2025 06:32 pm

Cinque Terre

420

Cinque Terre

0

ಸಂಬಂಧಿತ ಸುದ್ದಿ