", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1757338973-image-(16).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವಾಗಲು ತಮ್ಮ ಸರಳತೆ ಮತ್ತು ಜೀವನಶೈಲಿಗೆ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಅದ್ದರಿಂದಲೇ ...Read more" } ", "keywords": ""Vice President election, electoral college, parliamentary voting, BJP government, opposition parties, electoral process, India news" ", "url": "https://dashboard.publicnext.com/node" } ಉಪರಾಷ್ಟ್ರಪತಿ ಮತದಾನದ ಬಗ್ಗೆ ತರಬೇತಿ : ಕೊನೆಯ ಸಾಲಲ್ಲಿ ಕುಳಿತು ಟ್ರೇನಿಂಗ್ ಪಡೆದ ಪ್ರಧಾನಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪರಾಷ್ಟ್ರಪತಿ ಮತದಾನದ ಬಗ್ಗೆ ತರಬೇತಿ : ಕೊನೆಯ ಸಾಲಲ್ಲಿ ಕುಳಿತು ಟ್ರೇನಿಂಗ್ ಪಡೆದ ಪ್ರಧಾನಿ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವಾಗಲು ತಮ್ಮ ಸರಳತೆ ಮತ್ತು ಜೀವನಶೈಲಿಗೆ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಅದ್ದರಿಂದಲೇ ಅವರು ಹೋದಲ್ಲೆಲ್ಲಾ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯ ಜೀವಿಗಳು ಅವರನ್ನು ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುತ್ತಾರೆ. ಅದ್ರಂತೆ, ಪ್ರಧಾನಿ ನರೇಂದ್ರ ಮೋದಿಯವರ ಸರಳತೆಗೆ ಮತ್ತೊಂದು ಉದಾಹರಣೆಯೊಂದು ಇಂದು ನಡೆದ ಬಿಜೆಪಿ ಕಾರ್ಯಗಾರದಲ್ಲಿ ಕಂಡುಬಂದಿದೆ.

ಹೌದು, ಮುಂಬರುವ ಮಹತ್ವದ ಉಪರಾಷ್ಟ್ರಪತಿ ಚುನಾವಣೆಗೆ ತಯಾರಿ ನಡೆಸಲು, ಬಿಜೆಪಿ ಸಂಸದರಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಪ್ರಧಾನಿ ಮೋದಿಯವರು ಸಾಮಾನ್ಯ ಸಂಸದರಂತೆ, ಆರಂಭದಿಂದಲೂ ಕಾರ್ಯಕ್ರಮದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು.

ಇನ್ನು ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯುವರು ಮುಖ್ಯ ವ್ಯಕ್ತಿಯಂತೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳದೆ, ಸಾಮಾನ್ಯ ಕಾರ್ಯಕರ್ತರಂತೆ ಕೊನೆಯ ಸಾಲಿನಲ್ಲಿ ಕುಳಿತು ಸಭೆಯಲ್ಲಿ ಭಾಗವಹಿಸಿದರು. ಅದ್ರಂತೆ, ಈ ಕಾರ್ಯಕ್ರಮವು ಬಿಜೆಪಿಯೊಳಗಿನ ಏಕತೆ ಮತ್ತು ನಮ್ರತೆಯ ಸಂಕೇತವಾಗಿದೆ, ಅಲ್ಲಿ ಪ್ರಧಾನಿ ತಮ್ಮ ಸರಳತೆಯಿಂದ ಎಲ್ಲರನ್ನೂ ಮೆಚ್ಚಿಸಿದರು.

ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅಲ್ಲಿಗೆ ತಲುಪಿದಾಗ, ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಬದಲು ಹಿಂದಿನ ಸಾಲನ್ನೇ ಆರಿಸಿಕೊಂಡರು ಎನ್ನಲಾಗಿದೆ. ಅದ್ರಂತೆ, ಅವರು ಸಾಮಾನ್ಯ ಕಾರ್ಯಕರ್ತ ಅಥವಾ ಸಂಸದರಂತೆ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಎಲ್ಲಾ ಚರ್ಚೆಗಳಲ್ಲಿ ಸಕ್ರಿಯವಾಗಿದರು. ಈ ನಡೆ ಪ್ರಧಾನಿಯವರ ನಮ್ರತೆ ಮತ್ತು ಪಕ್ಷದ ಕಾರ್ಯಕರ್ತರೊಂದಿಗಿನ ಸಂಪರ್ಕವನ್ನು ಎತ್ತಿ ತೋರಿಸುತ್ತದೆ.

Edited By : Nirmala Aralikatti
PublicNext

PublicNext

08/09/2025 07:12 pm

Cinque Terre

11.25 K

Cinque Terre

1

ಸಂಬಂಧಿತ ಸುದ್ದಿ