", "articleSection": "Politics,Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1757385753-Untitled-design---2025-09-09T081656.813.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ : ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಘಟನೆ ಬಳಿಕ, ಚನ್ನಪಟ್ಟಣದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ರ...Read more" } ", "keywords": "Maddur incident, Channapatna high alert, police no leave, SP Srinivas Gowda order, Ganesh immersion security, Ganesh procession alert, Karnataka police, law and order, communal tension, police deployment", "url": "https://dashboard.publicnext.com/node" }
ಮಂಡ್ಯ : ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಘಟನೆ ಬಳಿಕ, ಚನ್ನಪಟ್ಟಣದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ರಾಮನಗರ ಜಿಲ್ಲಾ ಎಸ್‌ಪಿ ಶ್ರೀನಿವಾಸ್ ಗೌಡ ಅಧಿಕಾರಿಗಳಿಗೆ ತಾಖೀತು ನೀಡಿದ್ದು, "ಒಂದು ವಾರ ಹೆಂಡತಿ-ಮಕ್ಕಳು, ಮನೆ ಎಲ್ಲವನ್ನೂ ಮರೆತು ಕೆಲಸದಲ್ಲಿ ತೊಡಗಿರಿ ಎಂದು ಸೂಚನೆ ನೀಡಿದ್ದಾರೆ.
ಸಬ್ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಡಿವೈಎಸ್‌ಪಿಗಳು ತಮ್ಮ ಠಾಣಾ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಚನ್ನಪಟ್ಟಣ ಗಣೇಶ ಮೆರವಣಿಗೆಗೆ ಹೈ ಅಲರ್ಟ್ ಜಾರಿಗೊಳಿಸಲಾಗಿದೆ.
"ಮದ್ದೂರಿನಂತಹ ಅಹಿತಕರ ಘಟನೆ ನಡೆಯಬಾರದು. ಈಗಿನಿಂದಲೇ ಸೂಕ್ತ ಪ್ಲಾನ್, ಬಂದೋಬಸ್ತ್ ಮಾಡಿಕೊಂಡಿರಬೇಕು" ಎಂದು ಎಸ್‌ಪಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 14 ಮತ್ತು 15ರಂದು ಚನ್ನಪಟ್ಟಣದಲ್ಲಿ ಗಣೇಶ ಮೆರವಣಿಗೆಗಳು ಜರುಗಲಿದ್ದು, ಆ ದಿನಗಳು ಸೇರಿದಂತೆ ಒಂದು ವಾರ ಯಾವುದೇ ಪೊಲೀಸರಿಗೆ ರಜೆ ಇರೋದಿಲ್ಲ, ಮೆರವಣಿಗೆ ಸುಸೂತ್ರವಾಗಿ ಮುಗಿಯುವವರೆಗೆ ಯಾರೂ ತಮ್ಮ ಠಾಣಾ ವ್ಯಾಪ್ತಿಯನ್ನು ಬಿಟ್ಟು ಹೊರಗೆ ತೆರಳಬಾರದು ಎಂಬ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಎಸ್‌ಪಿ ಶ್ರೀನಿವಾಸ್ ಗೌಡ ಚನ್ನಪಟ್ಟಣಕ್ಕೆ ಹೈ ಅಲರ್ಟ್ ಘೋಷಿಸಿದ್ದಾರೆ.
PublicNext
09/09/2025 08:12 am