", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/463655-1757342368-manjunath---2025-09-08T200920.642.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂಬ ಹೆಸರಿಡುವ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಇದರ ಶಿಫಾರಸ್ಸು ಕೇಂ...Read more" } ", "keywords": "Bengaluru metro station, Saint Mary name, CM Siddaramaiah assurance, Bengaluru metro naming, St Mary metro station proposal, Karnataka government decision, metro station renaming Bengaluru, Siddaramaiah announcement, Bengaluru news, St Mary celebration", "url": "https://dashboard.publicnext.com/node" }
ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂಬ ಹೆಸರಿಡುವ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಇದರ ಶಿಫಾರಸ್ಸು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಕೇಂದ್ರ ಒಪ್ಪಿಗೆ ನೀಡಿದ ಬಳಿಕ ನಾಮಕರಣ ದಿನಾಂಕ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಂಗಳೂರುದಲ್ಲಿ ನಡೆದ ಸೆಂಟ್ ಮೇರೀಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನನಗೆ ಅಪಾರ ಸಂತೋಷವಾಗಿದೆ. ಜನತೆಗೆ ಸೆಂಟ್ ಮೇರಿಸ್ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಾನು ಪ್ರತಿ ವರ್ಷ ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅನೇಕರು ಇಲ್ಲಿ ಹರಕೆ ಹೊತ್ತು, ನಂತರ ಹರಕೆ ತೀರಿಸುತ್ತಾರೆ. ಜನರು ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ತಾಯಿ ಸೆಂಟ್ ಮೇರಿಯನ್ನು ಪ್ರಾರ್ಥಿಸುತ್ತಾರೆ. ಅದಕ್ಕಾಗಿಯೇ ಅವರನ್ನು ಆರೋಗ್ಯ ಮಾತೆ ಎಂದು ಕರೆಯುತ್ತಾರೆ" ಎಂದರು.
"ಎಲ್ಲರಿಗೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಗಳಿವೆ. ವಿವಿಧತೆಯಲ್ಲಿ ಏಕತೆ ಸಾಧಿಸುವುದು ಮುಖ್ಯ. ನಮ್ಮ ಸರ್ಕಾರ ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುತ್ತದೆ. ಸಹಿಷ್ಣುತೆ ಇದ್ದಾಗ ಮಾತ್ರ ಮನುಷ್ಯತ್ವ ಬೆಳೆಯುತ್ತದೆ" ಎಂದು ಹೇಳಿದರು.
"ಪ್ರೀತಿ ಮತ್ತು ವಿಶ್ವಾಸ ಎಲ್ಲರಲ್ಲೂ ಇರಬೇಕು, ದ್ವೇಷಕ್ಕೆ ಅವಕಾಶ ಇರಬಾರದು. ಏಸು ಕ್ರಿಸ್ತ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿ ಶಾಂತಿ ಮತ್ತು ಮಾನವೀಯತೆಯ ಸಂದೇಶ ನೀಡಿದ್ದಾರೆ. ನಾವು ಸೆಂಟ್ ಮೇರೀಸ್ ಅವರಂತೆ ಪ್ರೀತಿಯಿಂದ ಬದುಕೋಣ. ಶಾಂತಿಯನ್ನು ಕದಡುವ ಕೆಲಸ ಯಾರೂ ಮಾಡಬಾರದು" ಎಂದು ಪ್ರತಿಜ್ಞೆ ಮಾಡಿಸಿದರು.
PublicNext
08/09/2025 08:10 pm