", "articleSection": "Infrastructure,Science and Technology,Government", "image": { "@type": "ImageObject", "url": "https://prod.cdn.publicnext.com/s3fs-public/229640-1757400196-vande.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಈ ಸಲ ದೀಪಾವಳಿ ಹೊತ್ತಿಗೆ ರೈಲ್ವೇ ಇಲಾಖೆ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿದೆ. ದೇಶದ ಮೊಟ್ಟ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಆರಂಭಿಸಲು ಮುಂ...Read more" } ", "keywords": "india first sleeper vande bharat, sleeper vande bharat train, vande bharat sleeper coach, vande bharat new train, indian railways sleeper vande bharat, sleeper vande bharat details, vande bharat express sleeper, india railway news, sleeper vande bharat information, vande bharat latest update", "url": "https://dashboard.publicnext.com/node" } ದೇಶದ ಮೊದಲ ಸ್ಲೀಪರ್ ವಂದೇ ಭಾರತ್ ಬಗ್ಗೆ ಇಲ್ಲಿದೆ ಮಾಹಿತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಮೊದಲ ಸ್ಲೀಪರ್ ವಂದೇ ಭಾರತ್ ಬಗ್ಗೆ ಇಲ್ಲಿದೆ ಮಾಹಿತಿ

ಈ ಸಲ ದೀಪಾವಳಿ ಹೊತ್ತಿಗೆ ರೈಲ್ವೇ ಇಲಾಖೆ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿದೆ. ದೇಶದ ಮೊಟ್ಟ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಆರಂಭಿಸಲು ಮುಂದಾಗಿದೆ. ರಾಷ್ಟ್ರರಾಜಧಾನಿ ನವದೆಹಲಿಯಿಂದ ಪ್ರಯಾಗ್‌ರಾಜ್ ಮಾರ್ಗವಾಗಿ ಬಿಹಾರ ರಾಜಧಾನಿ ಪಾಟ್ನಾ ನಗರಕ್ಕೆ ಈ ರೈಲು ಸಂಚರಿಸಲಿದೆ. ಈ ಒಂದು ಸಾವಿರ ಕಿಲೋ ಮೀಟರ್ ಮಾರ್ಗವನ್ನು ಈ ರೈಲು ಕೇವಲ ಹನ್ನೊಂದುವರೆ ತಾಸಿನಲ್ಲಿ ಕ್ರಮಿಸಲಿದೆ.

ಅಂದ್ರೆ ಇದೇ ಮಾರ್ಗದಲ್ಲಿ ಈಗಾಗಲೇ ಸಂಚರಿಸ್ತಾ ಇರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಇಷ್ಟೇ ದೂರ ಕ್ರಮಿಸಲು 23 ತಾಸು ತೆಗೆದುಕೊಳ್ಳುತ್ತೆ. ಆದ್ರೆ ಇದೇ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸೋದ್ರಿಂದ ಪ್ರಯಾಣಿಕರ ಬಹುಪಾಲು ಸಮಯ ಉಳಿತಾಯ ಆಗಲಿದೆ. ಗಂಟೆಗೆ 180 ಕಿಲೋ ಮೀಟರ್ ಓಡುವ ಈ ರೈಲು ರಾತ್ರಿ 8 ಗಂಟೆಗೆ ಹೊರಟು ಬೆಳಿಗ್ಗೆ 7-30ಕ್ಕೆ ದೆಹಲಿ ತಲುಪಲಿದೆ. ಒಟ್ಟು 16 ಬೋಗಿಗಳು ಇದರಲ್ಲಿ ಇರುತ್ತೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತೆ ಅಂತಾ ರೈಲ್ವೇ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟೆಂಬರ್ ಅಂತ್ಯದಲ್ಲಿ ಈ ರೈಲು ಹಳಿಗೆ ಇಳಿಯುವ ನಿರೀಕ್ಷೆ ಇದೆ.

Edited By : Manjunath H D
PublicNext

PublicNext

09/09/2025 12:17 pm

Cinque Terre

15.14 K

Cinque Terre

1

ಸಂಬಂಧಿತ ಸುದ್ದಿ