", "articleSection": "Crime,Law and Order,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757400869-06~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Raghavendra Bng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೆಲಮಂಗಲ: ಅಕ್ರಮ ಗೋಮಾಂಸ ಸಾಗಾಟದ ಗ್ಯಾಂಗ್ಗಳ ನಡುವೆ ಗಲಾಟೆ ನಡೆದು, ಓರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೆಲಮಂಗ...Read more" } ", "keywords": "Nelamangala,illegal beef transport,gang clash,stabbing,gang rivalry,crime news,local news,Karnataka,beef smuggling,knife attack", "url": "https://dashboard.publicnext.com/node" }
ನೆಲಮಂಗಲ: ಅಕ್ರಮ ಗೋಮಾಂಸ ಸಾಗಾಟದ ಗ್ಯಾಂಗ್ಗಳ ನಡುವೆ ಗಲಾಟೆ ನಡೆದು, ಓರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೆಲಮಂಗಲದ ಕೆಂಪಲಿಂಗನಹಳ್ಳಿ ಗ್ರಾಮದ ಬಳಿ ನಡೆದಿದೆ.
ಕುಣಿಗಲ್ ತಾಲ್ಲೂಕಿನ ಬೊಮ್ಮೇನಹಳ್ಳಿ ಪಾಳ್ಯದ ಮೊಹಮ್ಮದ್ ಕಲೀಮ್ ಉಲ್ಲಾ 50 ವರ್ಷ, ಮೂವರು ಅಪರಿಚಿತರಿಂದ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎನ್ನಲಾಗಿದೆ. ಬೆಂಗಳೂರಿಗೆ ತೆರಳಿದ್ದ ವ್ಯಕ್ತಿಯನ್ನ ವಾಟ್ಸಾಪ್ ಕಾಲ್ ಮೂಲಕ ನೆಲಮಂಗಲ ನಗರಕ್ಕೆ ಕರೆಸಿಕೊಂಡ ಮೂವರ ಗ್ಯಾಂಗ್ ಈ ಕೃತ್ಯ ನಡೆಸಿದೆ. ಅಕ್ರಮ ಮಾಂಸ ಸಾಗಾಟದ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಮಾರಣಾಂತಿಕವಾಗಿ ಹಲ್ಲೆಯಿಂದ ಗಾಯಗೊಂಡ ಮೊಹಮ್ಮದ್ ಕಲೀಮ್ ಉಲ್ಕಾ ತಾನೇ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದು, ಸದ್ಯ ಕುಣಿಗಲ್ ಸಮೀಪದ ಖಾಸಗಿ ಆಸ್ಪತ್ರೆಯೊಂದ್ರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ವಿಷಯ ತಿಳಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಮತ್ತು ಸೀನ್ ಆಫ್ ಕ್ರೈಂ ಟೀಮ್ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
PublicNext
09/09/2025 12:24 pm