ನೆಲಮಂಗಲ: ರಸ್ತೆಯಲ್ಲಿ ಕಾರ್‌ಗೆ ಆಟೋ ರಿಕ್ಷಾ ಟಚ್ ಆಗಿದ್ದಕ್ಕೆ, ಅಟೋದಲ್ಲಿದ್ದ ಮೂವರ ಮೇಲೆ ಕಾರ್‌ನಲ್ಲಿದ್ದವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.
ಪವನ್(25), ನವೀನ್(28) ಮತ್ತು ಸಾಗರ್ (28) ಹಲ್ಲೆಗೊಳಗಾದ ಯುವಕರು ಸದ್ಯ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದವರಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.
PublicNext
09/09/2025 08:17 pm