ಬೆಂಗಳೂರು: ನಗರದಲ್ಲಿ ಅಕ್ರಮ ಬಾಂಗ್ಲಾ ಮತ್ತು ನೇಪಾಳಿ ವಲಸಿಗರು ಹೆಚ್ಚಾಗಿದ್ದಾರೆ. ಇವರನ್ನು ಪತ್ತೆ ಮಾಡಿ ಗಡಿಪಾರು ಮಾಡೋದೆ ರಾಜ್ಯ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ನಗರದ ಪೊಲೀಸ್ರು ಈ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಿದ್ರೆ. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಪೊಲೀಸ್ರ ಹೆಸರು ಹೇಳಿ ಬಾಂಗ್ಲಾ ವಲಸಿಗರಿಂದ ಹಣ ಸುಲಿಗೆ ಮಾಡ್ತಿದ್ದ ಪೊಲೀಸ್ ಸಿಬ್ಬಂದಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ಈ ಹಿಂದೆ ಆಂತರಿಕಾ ಭದ್ರತಾ ವಿಭಾಗ (ISD)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ನಾವಿ ಎಂಬಾತ ಮತ್ತೊಬ್ಬ ಖಾಸಗಿ ವ್ಯಕ್ತಿ ನಾಸೀರ್ ಖಾನ್ ಜೊತೆ ಸೇರಿ ಅಕ್ರಮ ಬಾಂಗ್ಲಾ ಪ್ರಜೆಗಳನ್ನ ಪತ್ತೆ ಮಾಡುತ್ತಿದ್ದರು. ಅವರು ಬಾಂಗ್ಲಾ ಪ್ರಜೆಗಳು ಅಂತ ಕನ್ಫರ್ಮ್ ಮಾಡಿಕೊಂಡು ಅಂಥವರಿಗೆ ತಾನು ಪೊಲೀಸ್, ನಿಮ್ಮನ್ನ ಬಂಧನ ಮಾಡುತ್ತೇನೆಂದು ಹೆದರಿಸಿ ಹಣ ಕೀಳುತ್ತಿದ್ರಂತೆ. ಕೆಲವರನ್ನ ಬಂಧನ ನೆಪದಲ್ಲಿ ಕಿಡ್ನಾಪ್ ಮಾಡಿ ಹಣ ಕೊಟ್ಟ ನಂತರ ಬಿಟ್ಟು ಕಳುಹಿಸಿದ್ದಾರೆ. ಇದರಿಂದ ಕಂಗೆಟ್ಟ ಸಂತ್ರಸ್ತರು ಪೊಲೀಸ್ ಸಿಬ್ಬಂದಿಯ ಬಿಚ್ಚಿಟ್ಟ ಕೃತ್ಯವನ್ನು ಆಧರಿಸಿ ಸದ್ಭಾವನಾ ಸಂಘಟನೆಯು ಸಿಸಿಬಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿ ಫೀಲ್ಡಿಗಿಳಿದ ಸಿಸಿಬಿ ಡಿಸಿಪಿ1 ಶ್ರೀಹರಿಬಾಬು ಅವರ ತಂಡ ಸದ್ಯ ಪೊಲೀಸ್ ಇಲಾಖೆಯ ಪ್ರಶಾಂತ್ ಮತ್ತು ಹೊಸಕೋಟೆ ಮೂಲದ ನಾಸಿರ್ ಖಾನ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
PublicNext
09/09/2025 09:27 pm