", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1757431389-WhatsApp-Image-2025-09-09-at-8.52.41-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Guruprasad Bng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೊಡ್ಡಬಳ್ಳಾಪುರ : ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟ ಜಾಗ ಅದು, ಆ ಜಾಗದಲ್ಲಿ ಕೈಗಾರಿಕೆ ತ್ಯಾಜ್ಯವನ್ನು ಹೂತು ಹಾಕಲಾಗುತ್...Read more" } ", "keywords": "Industrial waste dumping, park land contamination, contractor misconduct, villagers protest, environmental pollution, public health concerns, waste management issues, land degradation, government intervention, environmental regulations", "url": "https://dashboard.publicnext.com/node" }
ದೊಡ್ಡಬಳ್ಳಾಪುರ : ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟ ಜಾಗ ಅದು, ಆ ಜಾಗದಲ್ಲಿ ಕೈಗಾರಿಕೆ ತ್ಯಾಜ್ಯವನ್ನು ಹೂತು ಹಾಕಲಾಗುತ್ತಿದೆ, ತ್ಯಾಜ್ಯವನ್ನ ಹೂತು ಹಾಕುವುದನ್ನ ಗ್ರಾಮಸ್ಥರು ರೆಡ್ ಹ್ಯಾಂಡ್ ಪತ್ತೆ ಮಾಡಿದ್ದಾರೆ. ಗುತ್ತಿಗೆದಾರನನ್ನ ಪ್ರಶ್ನೆ ಮಾಡಿದ್ರೆ ಗ್ರಾಮಸ್ಥರ ಮೇಲೆ ದರ್ಪ ಮೆರೆದಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಓಬದೇನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಅಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿನ ಉದ್ಯಾನ ವನಕ್ಕೆ ಮೀಸಲಿಟ್ಟ ಜಾಗ, ಸುಟ್ಟಘಟ್ಟ ಗ್ರಾಮಕ್ಕೆ ಸೇರಿದ ಈ ಜಾಗದಲ್ಲಿ ಕಸ ತ್ಯಾಜ್ಯ ವಿಲೇವಾರಿ ಮಾಡುವ ಗುತ್ತಿಗೆದಾರ ನಂಜೇಗೌಡ ಎಂಬಾತ ಯಾರಿಗೂ ಗೊತ್ತಾಗದಂತೆ ಗುಂಡಿ ತೋಡಿ ಕೈಗಾರಿಕಾ ತ್ಯಾಜ್ಯವನ್ನ ಹೂತು ಹಾಕುತ್ತಿದ್ದಾನೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಓಬದೇನಹಳ್ಳಿ ನಿವಾಸಿ ಮುನಿರಾಜು ಮಾತನಾಡಿ, ಥರ್ಮಾಕೋಲ್, ಆಹಾರ ತ್ಯಾಜ್ಯ, ಮೆಡಿಕಲ್ ವೇಸ್ಟೇಜ್, ರಾಸಾಯನಿಕ ಯುಕ್ತ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯಕ್ಕೆ ಬೆಂಕಿ, ಮಣ್ಣಾಕಿ ಮುಚ್ಚುತ್ತಾರೆ. ಬೆಂಕಿ ಹಚ್ಚಿದಾಗ ಊರೆಲ್ಲಾ ದಟ್ಟ ಹೊಗೆ ಆವರಸಿ ಯಾರೂ ಮನೆಗಳಲ್ಲಿ ವಾಸ ಮಾಡೋದಕ್ಕೆ ಆಗೋದಿಲ್ಲ. ಗುಡ್ಡದಹಳ್ಳಿ ನಂಜೇಗೌಡ ಎಂಬ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ದರ್ಪದಿಂದ ಮಾತನಾಡಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ನಮಗೆ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಏನಾದರೂ ಹೆಚ್ಚುಕಮ್ಮಿ ಆದರೆ ಯಾರು ಹೊಣೆ. ಈ ಕೂಡಲೇ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಅಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು, ಮಣ್ಣಿನಲ್ಲಿ ಹೂತು ಹಾಕಿರುವ ತ್ಯಾಜ್ಯವನ್ನ ಹೊರಗೆ ತೆಗೆದು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಲಾಗಿದೆ. ತ್ಯಾಜ್ಯ ಸುರಿದ ಕೈಗಾರಿಕೆ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ದೂರು ನೀಡುವುದ್ದಾಗಿ ಹೇಳಿದ್ದಾರೆ.
PublicNext
09/09/2025 08:53 pm