", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/474799-1757477302-NEWS-05.5.01_32_41_24.Still049.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Guruprasad Bng" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೊಡ್ಡಬಳ್ಳಾಪುರ: 40 ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದ ಜಿಲ್ಲಾಧಿಕಾರಿ ಬಸವರಾಜು ಅವರ ದಿಟ್ಟ ಕ್ರಮಕ್ಕೆ ಸಾರ್ವಜನ...Read more" } ", "keywords": "bengaluru, government property, worth 40 crores, reclaimed by government, dc bold action, appreciation, bengaluru news, kannada headline ", "url": "https://dashboard.publicnext.com/node" } ಬೆಂಗಳೂರು: 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಸರ್ಕಾರದ ವಶಕ್ಕೆ - ಡಿಸಿ ದಿಟ್ಟ ಕ್ರಮಕ್ಕೆ ಅಭಿನಂದನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಸರ್ಕಾರದ ವಶಕ್ಕೆ - ಡಿಸಿ ದಿಟ್ಟ ಕ್ರಮಕ್ಕೆ ಅಭಿನಂದನೆ

ದೊಡ್ಡಬಳ್ಳಾಪುರ: 40 ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದ ಜಿಲ್ಲಾಧಿಕಾರಿ ಬಸವರಾಜು ಅವರ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಬುದ್ಧ ಕರ್ನಾಟಕ ಭೀಮ ಸೇನೆ ಜಿಲ್ಲಾಧಿಕಾರಿಗಳನ್ನ ಅಭಿನಂದಿಸುವ ಮೂಲಕ ಭೂಗಳ್ಳರಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿದರು.

ದೊಡ್ಡಬಳ್ಳಾಪುರ ನಗರದಂಚಿನ ಅರೇಹಳ್ಳಿಗುಡ್ಡದಹಳ್ಳಿ ಸರ್ವೆ ನಂಬರ್ 57ರ ಸರ್ಕಾರಿ ಗೋಮಾಳದಲ್ಲಿ 6 ಎಕರೆ ಜಾಗವನ್ನ ಅಕ್ರಮವಾಗಿ ಮಂಜೂರು ಮಾಡಲಾಗಿತ್ತು. ಕಾನೂನುಬಾಹಿರವಾಗಿ ಮಂಜೂರಾತಿಯನ್ನ ವಜಾ ಮಾಡುವಂತೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಹೋರಾಟ ಮಾಡಿತ್ತು. ಹೋರಾಟದ ಫಲ ಕಾನೂನುಬಾಹಿರ ಮಂಜೂರಾತಿ ವಜಾ ಆಗಿದೆ, ಜಿಲ್ಲಾಧಿಕಾರಿಗಳಾದ ಬಸವರಾಜು ಸೆಪ್ಟೆಂಬರ್ 2ರಂದು ಹೊರಡಿಸಿದ ಆದೇಶದಲ್ಲಿ ಸುಮಾರು 40 ಕೋಟಿ ಮೌಲ್ಯದ 6 ಎಕರೆ ಜಾಗವನ್ನ ಸರ್ಕಾರಿ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾಧಿಕಾರಿಗಳ ದಿಟ್ಟ ಕ್ರಮ, ಭೂಗಳ್ಳರಿಗೆ ಎಚ್ಚರಿಕೆ ಸಂದೇಶವನ್ನ ರವಾನೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕಾನೂನುಬಾಹಿರ ಮಂಜೂರಾತಿ ವಜಾ ಮಾಡುವಂತೆ ಹೋರಾಟ ಮಾಡಿದ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಯು.ಮುನಿರಾಜು ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳನ್ನ ಅಭಿನಂದಿಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಯು.ಮುನಿರಾಜು, ಜಿಲ್ಲಾಧಿಕಾರಿಗಳು ಯಾವುದಕ್ಕೂ ಅಂಜದೆ ಬಗ್ಗದೆ ಜಾಗವನ್ನ ಸರ್ಕಾರಿ ವಶಕ್ಕೆ ಪಡೆದಿದ್ದಾರೆ, ಅವರಿಗೆ ನಾವು ಅಭಿನಂದನೆ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಕಾನೂನುಬಾಹಿರವಾಗಿ ಭೂ ಮಂಜೂರಾತಿ ಮಾಡಿಸಿಕೊಂಡ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಯಾವ ಆಧಾರ ಮೇಲೆ ಅಧಿಕಾರಿಗಳು ಭೂ ಮಂಜೂರಾತಿ ಮಾಡಿದರು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳ ಬೇಕೆಂದು ಮನವಿ ಮಾಡಿದರು

Edited By :
PublicNext

PublicNext

10/09/2025 09:38 am

Cinque Terre

10.1 K

Cinque Terre

1

ಸಂಬಂಧಿತ ಸುದ್ದಿ