Exclusive..
ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ದಿನಸಿ ಖರೀದಿಸುವ ನೆಪದಲ್ಲಿ ಬಂದ ಕಳ್ಳನೋರ್ವ ಕ್ಷಣಾರ್ಧದಲ್ಲಿ ಅಡುಗೆ ಎಣ್ಣೆ ಕ್ಯಾನ್‌ಗಳನ್ನು ಎಗರಿಸಿ ಪರಾರಿಯಾದ ಘಟನೆ ಬೆಂಗಳೂರು ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದ್ದು, ಕಳ್ಳತನದ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಲ್ಲಸಂದ್ರದ ಪೈಪ್ ಲೈನ್‌ನ ಮಂಜುನಾಥ್ ಎಂಬುವರಿಗೆ ಸೇರಿದ ಮಾರುತಿ ಪ್ರಾವಿಷನ್ ಸ್ಟೋರ್‌ನಲ್ಲಿ ಈ ಕೃತ್ಯ ನಡೆದಿದ್ದು, ಡಿಯೋ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಓರ್ವ ಬೇಳೆ ಖರೀದಿಸುವ ನೆಪದಲ್ಲಿ ಬಂದು ಅಂಗಡಿ ವರ್ತಕನ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ 5 ಲೀಟರ್ ಅಡುಗೆ ಎಣ್ಣೆಯ ಎರಡು ಕ್ಯಾನ್‌ಗಳನ್ನು ಎಗರಿಸಿಕೊಂಡು, ಡಿಯೋ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಕಳ್ಳತನ ಕೃತ್ಯದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನ ಸ್ಪಷ್ಟವಾಗಿ ಪರಿಶೀಲಿಸಿರೋ ಪೊಲೀಸ್ರು, ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸ್ರು ಬೈಕ್ ನಂಬರ್ ಪ್ಲೇಟ್ ಮೂಲಕ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
PublicNext
09/09/2025 10:56 pm