", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/474799-1757348833-yutube1920.02_42_39_14.Still3747.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Raghavendra Bng" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೆಲಮಂಗಲ: ದೊಡ್ಡವರು ಹೇಳೋ ಗಾದೆ ಹಾಗೆ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೂ ಅಂತಾರೆ. ಏಕಂದ್ರೆ, ಗಂಡ-ಹೆಂಡತಿ ಅಂದ್ಮೇಲೆ ಸರಸ-ವಿರಸ, ಜಗಳ-ಮುನಿಸು...Read more" } ", "keywords": "nelamangala, woman blackmail, rape incident, private video viral, crime against women, sexual assault case, nelamangala news, kannada headline ", "url": "https://dashboard.publicnext.com/node" } ನೆಲಮಂಗಲ: ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ- ಖಾಸಗಿ ವಿಡಿಯೋ ವೈರಲ್ ಮಾಡಿದ ಕೀಚಕರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ- ಖಾಸಗಿ ವಿಡಿಯೋ ವೈರಲ್ ಮಾಡಿದ ಕೀಚಕರು

ನೆಲಮಂಗಲ: ದೊಡ್ಡವರು ಹೇಳೋ ಗಾದೆ ಹಾಗೆ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೂ ಅಂತಾರೆ. ಏಕಂದ್ರೆ, ಗಂಡ-ಹೆಂಡತಿ ಅಂದ್ಮೇಲೆ ಸರಸ-ವಿರಸ, ಜಗಳ-ಮುನಿಸು, ಅನುಮಾನ ಇದ್ದೇ ಇರುತ್ತದೆ. ಇಂದು ಗಂಡನ ಮೇಲಿನ ಅದೇ ಅನುಮಾನ, ಈಗ ಹೆಂಡತಿಯ ಮಾನ ಹರಾಜಾಗುವಂತೆ ಮಾಡಿದೆ.

ಆಗಬಾರದ್ದು ಆಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ, ಇತ್ತ ಮನೆಯ ನೆಮ್ಮದಿ ಹಾಳಾಗಿದೆ. ಹೌದು, ನೆಲಮಂಗಲ ತಾಲ್ಲೂಕು ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, ಕಂಬಾಳು ಗ್ರಾಮದ ರೇಣುಕಾ ಪ್ರಸಾದ್ ಎಂಬಾತ ವಿವಾಹಿತ ಮಹಿಳೆ ಮೇಲೆ ಬೇರೆಡೆ ಅತ್ಯಾಚಾರವೆಸಗಿ, ನಂತ್ರ ಅವಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು, ಆಕೆಗೆ ಬೆದರಿಕೆ ಹಾಕಿ ಚೆನ್ನಾಗಿ ಬಳಸ್ಕೊಂಡಿದ್ದಾನೆ.

ಅಸಲಿಗೆ ಈ ಆರೋಪಿ ರೇಣುಕಾ ಪ್ರಸಾದ್ ಮಹಿಳೆಗೆ "ನಿನ್ನ ಪತಿ ಲಾಡ್ಜ್‌ನಲ್ಲಿ ಇನ್ನೊಬ್ಬ ಮಹಿಳೆಯ ಜೊತೆ ಇದ್ದಾನೆ, ತೋರಿಸುತ್ತೇನೆ" ಬಾ ಎಂದು ಹೇಳಿ ಆಕೆಯನ್ನು ಲಾಡ್ಜ್‌ಗೆ ಕರೆದ್ಕೊಂಡು ಹೋಗಿದ್ದ. ಮಹಿಳೆ ಲಾಡ್ಜ್ ಗೆ ಹೋದ ಮೇಲೆ "ನನಗೆ ಅರ್ಧ ಗಂಟೆ ಸಹಕರಿಸಿಲ್ಲ ಅಂದ್ರೆ ನಿನ್ನ ಗಂಡನಿಗೆ ಫೋನ್ ಮಾಡುತ್ತೀನಿ, ಊರಿನಲ್ಲೆಲ್ಲಾ ನಿನ್ನ ಬಗ್ಗೆ ಹೇಳಿಬಿಡ್ತೀನಿ" ಅಂತ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಲ್ಲದೆ ಆಕೆ ಜೊತೆಗಿದ್ದ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ಇಷ್ಟೆಲ್ಲಾ ನಡೆದ ಮೇಲೂ ಮತ್ತೆ ಬಂದು ಸಹಕರಿಸು, ಇಲ್ಲದಿದ್ದರೆ ವಿಡಿಯೋವನ್ನು ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ಪಾಪಿಯ ಜಾಲಕ್ಕೆ ಸಿಲುಕಿದ ಮಹಿಳೆ ತೀವ್ರ ಕಿರುಕುಳ ಅನುಭವಿಸಿದ್ದಾಳೆ.

ಈ ನಡುವೆ ಆರೋಪಿ ರೇಣುಕಾ ಪ್ರಸಾದ್ ಆತನ ಪಟಾಲಂ ಗ್ಯಾಂಗ್ ಶಿವಗಂಗೆ ಪಂಚಾಯಿತಿ ಸದಸ್ಯ ಕಂಬಾಳು ಪ್ರಭುದೇವ, ನಂದೀಶ ಮತ್ತು ಬಸವಪಟ್ಟಣ ಗ್ರಾಮದ ಬಸವರಾಜುಗೆ ಮಹಿಳೆ ಜೊತೆ ಇದ್ದ ಖಾಸಗಿ ವಿಡಿಯೋ ಶೇರ್ ಮಾಡಿದ್ದಾನೆ. ಇದೇ ವಿಡಿಯೋ ಇಟ್ಕೊಂಡಿದ್ದ ಕೀಚಕರು ಆಕೆಗೆ ಲೈಂಗಿಕ ದೌರ್ಜನ್ಯ ಕೊಡಲು ಆರಂಭಿಸಿದ್ದಾರೆ. ದೌರ್ಜನ್ಯ ತಾಳಲಾಗದೆ ಮಹಿಳೆ ಕೊನೆಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮತ್ತು ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

ಸದ್ಯ ತುಮಕೂರು ಮಹಿಳಾ ಪೊಲೀಸ್ರು ಎ1 ಅರೋಪಿ ರೇಣುಕಾ ಪ್ರಸಾದ್ ನನ್ನು ಬಂಧಿಸಿದ್ದಾರೆ. ಪ್ರಭುದೇವ, ನಂದೀಶ ಮತ್ತು ಬಸವರಾಜನ ಮೇಲೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಲೇ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಕೀಚಕರಿಗಾಗಿ ಪೊಲೀಸ್ರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Edited By :
PublicNext

PublicNext

08/09/2025 09:57 pm

Cinque Terre

20.36 K

Cinque Terre

0

ಸಂಬಂಧಿತ ಸುದ್ದಿ