#ಚಿಕ್ಕಪೇಟೆ
ಬೆಂಗಳೂರು:ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಪೂಜಾ ಎಂಬಾಕೆಯನ್ನ ಬಂಧಿಸಲಾಗಿದ್ದು, 7 ಲಕ್ಷ ಮೌಲ್ಯದ 67 ಗ್ರಾಂ ಚಿನ್ನ 300 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. 'ಕಳೆದ ಜುಲೈನಲ್ಲಿ ಮನೆಗೆಲಸಕ್ಕೆ ಸೇರಿಕೊಂಡಿದ್ದ ಆರೋಪಿ, ಮನೆಯ ಕಬೋರ್ಡ್ ಕೀ ಓಪನ್ ಮಾಡಿ ಕಳ್ಳತನ ಮಾಡಿದ್ದಳು. ಬಳಿಕ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಿದ್ದಳು. ಆಗಸ್ಟ್ 26ರಂದು ಮನೆಯವರು ಕಬೋರ್ಡ್ ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ನಂತರ ಬಾಣಸವಾಡಿ ಬಳಿ ವಾಸವಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.
PublicNext
09/09/2025 04:34 pm