ಉಡುಪಿ: ಉಡುಪಿ ಶ್ರೀ ಕೃಷ್ಣಮಠ ಜನ್ಮಾಷ್ಟಮಿ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ 14 ಮತ್ತು 15ರಂದು ಅಷ್ಠಮಿ ನಡೆಯಲಿದೆ. ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ತೋರಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾಗಿದೆ.
ಈ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಅಷ್ಟಮಠಗಳ ರಥ ಬೀದಿಯಲ್ಲಿ ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಎಲ್ಲ ಸೇರಿ ಗ್ರಾಮೀಣ ಕ್ರೀಡೆಯಲ್ಲಿ ಭಾಗಿಯಾದರು. ಟೊಂಕ ,ಕಬಡ್ಡಿ ,ಓಟ ಸೇರಿದಂತೆ ವಿವಿಧ ಗ್ರಾಮೀಣ ಆಟಗಳನ್ನು ಆಡಿ ಜನ ಸಂಭ್ರಮಿಸಿದರು. ಈ ಗ್ರಾಮೀಣ ಕ್ರೀಡೋತ್ಸವ ಕೃಷ್ಣ ಭಕ್ತರಿಗೆ ಹೊಸ ಹುರುಪು ನೀಡಿತು. ನೋಡುಗರಿಗೆ ಕಡೆಗೋಲು ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವಂತಿತ್ತು.
PublicNext
09/09/2025 01:46 pm