", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/463655-1757489008-manjunath---2025-09-10T125323.166.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಶೇಷಾದ್ರಿಪುರದ ಎ. ವಿ. ವರದಾಚಾರ್ ಕಲಾಕ್ಷೇತ್ರದಲ್ಲಿ ನನ್ನ ಮಗಳೇ ಸೂಪರ್ ಸ್ಟಾರ್ ಚಿತ್ರಕ್ಕೆ ಮುಹೂರ್ತ ನೆರವೇರಿತು. ಈ ಚಿತ್ರದಲ್...Read more" } ", "keywords": ""Nan Mangale Super Star, AV Varadachar Kalakshetra, Kannada Movie Launch, Nanna Mangale Superstar, Baby Reetu Singh, Chaluvraj, Kannada Film Industry, AV Varadachar Auditorium" ", "url": "https://dashboard.publicnext.com/node" } 'ನನ್ನ ಮಗಳೇ ಸೂಪರ್ ಸ್ಟಾರ್‌ಗೆ ಎ. ವಿ. ವರದಾಚಾರ್ ಕಲಾಕ್ಷೇತ್ರದಲ್ಲಿ ಭರ್ಜರಿ ಚಾಲನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನ ಮಗಳೇ ಸೂಪರ್ ಸ್ಟಾರ್‌ಗೆ ಎ. ವಿ. ವರದಾಚಾರ್ ಕಲಾಕ್ಷೇತ್ರದಲ್ಲಿ ಭರ್ಜರಿ ಚಾಲನೆ

ಬೆಂಗಳೂರು: ಶೇಷಾದ್ರಿಪುರದ ಎ. ವಿ. ವರದಾಚಾರ್ ಕಲಾಕ್ಷೇತ್ರದಲ್ಲಿ 'ನನ್ನ ಮಗಳೇ ಸೂಪರ್ ಸ್ಟಾರ್' ಚಿತ್ರಕ್ಕೆ ಮುಹೂರ್ತ ನೆರವೇರಿತು. ಈ ಚಿತ್ರದಲ್ಲಿ ಜನಪ್ರಿಯ ಧಾರಾವಾಹಿ ಸೀತಾರಾಮ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದ ಬೇಬಿ ರೀತು ಸಿಂಗ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸಾಹಿತಿ ಬಿ. ಆರ್. ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್ ಹಾಗೂ ನಿರ್ದೇಶಕ ನಂಜುಂಡೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.

ಹನಿ ಫಿಲಂ ಮೇಕರ್ಸ್ ಸಂಸ್ಥೆಯಡಿ ಎನ್. ಎ. ಶಿವಕುಮಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಸಂಕಲನಕಾರನಾಗಿ ಹಲವು ಚಿತ್ರಗಳಲ್ಲಿ ಹೆಸರು ಮಾಡಿದ ಆಯುರ್ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಬೇಬಿ ರೀತುಸಿಂಗ್ ಜೊತೆ ಭಜರಂಗಿ ೨ ಖ್ಯಾತಿಯ ಚಲುವರಾಜ್, ಸಂಭ್ರಮಶ್ರೀ ಸೇರಿದಂತೆ ಹಲವರು ಇದ್ದಾರೆ.

ಚಿತ್ರದ ಕಥಾಹಂದರ ಪೋಷಕರು ತಮ್ಮ ಮಕ್ಕಳ ಮೇಲೆ ಹೇರಿಕೊಳ್ಳುವ ಆಸೆ-ಆಕಾಂಕ್ಷೆಗಳ ಹಿನ್ನೆಲೆಯನ್ನು ಹೊಂದಿದೆ. ಪೋಷಕರ ಕನಸುಗಳು ಹಾಗೂ ಮಕ್ಕಳ ಆಸೆ-ಆಕಾಂಕ್ಷೆಗಳ ನಡುವೆ ಮೂಡುವ ಸಂಘರ್ಷವನ್ನು ರಿಯಾಲಿಟಿ ಶೋ ಸನ್ನಿವೇಶಗಳೊಂದಿಗೆ ಚಿತ್ರವು ಪ್ರಸ್ತುತಪಡಿಸುತ್ತದೆ. ಬೆಂಗಳೂರಿನಲ್ಲಿ ಮೂವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಮೂರು ಹಾಡುಗಳನ್ನೊಳಗೊಂಡ ಈ ಚಿತ್ರಕ್ಕೆ ಸಾಹಿತ್ಯ ಬರೆದಿರುವವರು ಬಿ. ಆರ್. ಲಕ್ಷ್ಮಣರಾವ್, ಸಂಗೀತ ಸಂಯೋಜನೆ ಕೆವಿನ್ ಅವರದು.

ಸಂಕಲನಕಾರನಾಗಿ ಕೆಲಸ ಮಾಡಿದ್ದ ನಾನು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಹೊಸ ಹಾದಿ ಹಿಡಿದಿದ್ದೇನೆ” ಎಂದು ಆಯುರ್ ಹೇಳಿದರು. ಇದುವರೆಗೆ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಾನು ಈ ಬಾರಿ ನಾಯಕನಾಗಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದರು. ನಟ ಚಲುವರಾಜ್. ಪೋಷಕರು ಹಾಗೂ ಮಕ್ಕಳು ತಪ್ಪದೆ ನೋಡಬೇಕಾದ ಚಿತ್ರ ಇದು. ನಾನು ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಎಂದು ನಟಿ ಸಂಭ್ರಮಶ್ರೀ ಅಭಿಪ್ರಾಯಪಟ್ಟರು. ಬಹಳ ದಿನಗಳ ನಂತರ ಚಿತ್ರಕ್ಕೆ ಸಾಹಿತ್ಯ ಬರೆದು ಸಂತೋಷವಾಗಿದೆ. ಈ ಚಿತ್ರದಲ್ಲಿ ಮೂರು ಹಾಡುಗಳನ್ನು ಬರೆದಿದ್ದೇನೆ. ಎಂದು ಸಾಹಿತಿ ಬಿ. ಆರ್. ಲಕ್ಷ್ಮಣರಾವ್ ಹಂಚಿಕೊಂಡರು.“ಕಥೆ ನನಗೆ ತುಂಬಾ ಇಷ್ಟವಾಯಿತು, ನಾನೂ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ” ಎಂದರು ಪರಿಸರ ಪ್ರೇಮಿ ರೇವತಿ ಕಾಮತ್.

Edited By :
PublicNext

PublicNext

10/09/2025 12:53 pm

Cinque Terre

29.51 K

Cinque Terre

0