", "articleSection": "Religion,Viral", "image": { "@type": "ImageObject", "url": "https://prod.cdn.publicnext.com/s3fs-public/474799-1757478925-rells.00_33_27_13.Still009.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾಸರಗೋಡು: ಇಲ್ಲಿನ ಕೋಟ್ಟಿಕುಳಂ ನೂರಲ್ ಹುದಾ ಮದ್ರಸಾ ಆಯೋಜಿಸಿದ್ದ ಮೀಲಾದುನ್ನಬಿ ಮೆರವಣಿಗೆಯಲ್ಲಿ ಭಾಗವಹಿಸಿದವರು ಪಾಲಕ್ಕುನ್ನು ಕಳಗಂ ಶ್ರೀ ಭಗ...Read more" } ", "keywords": "kasaragod, meeladunnabi procession, salute to palakunnu kalagam temple, communal harmony, unity in diversity, viral scene, kasaragod news, kannada headline ", "url": "https://dashboard.publicnext.com/node" }
ಕಾಸರಗೋಡು: ಇಲ್ಲಿನ ಕೋಟ್ಟಿಕುಳಂ ನೂರಲ್ ಹುದಾ ಮದ್ರಸಾ ಆಯೋಜಿಸಿದ್ದ ಮೀಲಾದುನ್ನಬಿ ಮೆರವಣಿಗೆಯಲ್ಲಿ ಭಾಗವಹಿಸಿದವರು ಪಾಲಕ್ಕುನ್ನು ಕಳಗಂ ಶ್ರೀ ಭಗವತಿ ದೇವಸ್ಥಾನಕ್ಕೆ ಸಲ್ಯೂಟ್ ಮಾಡಿ ಗೌರವ ಸಲ್ಲಿಸಿರುವ ಸಾಮರಸ್ಯದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸೌಹಾರ್ದತೆ ಮೂಡಿಸಿರುವ ದೃಶ್ಯವನ್ನು ಪಾಲಕ್ಕುನ್ನು ಆರಾಟ್ಟು ಕಡವು ಮೂಲದ ಅನ್ಶಿತ್ ಅಶೋಕನ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಶನಿವಾರ ಬೆಳಗ್ಗೆ 11:30ಕ್ಕೆ ಅನ್ಶಿತ್ ತಮ್ಮ ಫ್ಯಾನ್ಸಿಯಲ್ಲಿ ಕುಳಿತಿದ್ದರು.
ಈ ವೇಳೆ ಮೀಲಾದುನ್ನಬಿ ಮೆರವಣಿಗೆ ಪಾಲಕ್ಕುನ್ನು ಕಳಗಂ ಶ್ರೀ ಭಗವತಿ ದೇವಸ್ಥಾನದ ಬಳಿ ಹಾದು ಹೋಗುತ್ತಿತ್ತು. ಆಗ ಮೆರವಣಿಗೆಯಲ್ಲಿದ್ದ ಕೆಡೆಟ್‌ಗಳು ದೇವಾಲಯದ ಕಡೆಗೆ ತಿರುಗಿ ಸಲ್ಯೂಟ್ ಮಾಡಿದ್ದಾರೆ. ಇದನ್ನು ಕಂಡು ಅಚ್ಚರಿಗೊಂಡ ಅನ್ಶಿತ್. ತಕ್ಷಣ ಈ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಬಳಿಕ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಕೇವಲ ಎರಡೇ ದಿನಗಳಲ್ಲಿ 25ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. 5 ಲಕ್ಷಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ. ಈ ವೀಡಿಯೊ ಇಷ್ಟೊಂದು ವೈರಲ್ ಆಗುತ್ತದೆ ಎಂದು ಅನ್ಶಿತ್ ನಿರೀಕ್ಷಿಸಿರಲಿಲ್ಲವಂತೆ.
PublicNext
10/09/2025 10:05 am