ಸಾಗರ: ನಗರದಲ್ಲಿ ಭಾನುವಾರ ಜನ್ನತ್‌ಗಲ್ಲಿ ಜೈ ಭುವನೇಶ್ವರಿ ಯುವಕ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ರಾಜಬೀದಿ ಉತ್ಸವ ಮಾಡಲಾಗುತ್ತಿತ್ತು. ಈ ಸಂದರ್ಭ ಮುಸ್ಲಿಮ್ ಸಮುದಾಯದ ಬಾಲಕರಿಬ್ಬರು ಮನೆಯ ಮೇಲಿನಿಂದ ಉಗಿಯುತ್ತಿರುವಂತಹ ವಿಡಿಯೋ ವೈರಲ್ ಆಗಿತ್ತು.
ಆಗ ಹಿಂದುಪರ ಸಂಘಟನೆಗಳು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದವು. ಗಣೇಶ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಒತ್ತಾಯಿಸಿದರು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಿಕ್ಕ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಅವರ ಪರವಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಪಾಲಕರು ಕ್ಷಮೆಯಾಚಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಇಬ್ಬರು ಬಾಲಕರಲ್ಲಿ ಓರ್ವ ಮೆರವಣಿಗೆ ಮೇಲೆ ಉಗಿದಿರುವುದು ಕಂಡುಬಂದಿದೆ.
ಸದ್ಯ ಈ ವಿಚಾರ ನೆಟ್ಟಿಗರಲ್ಲಿ ಚರ್ಚೆಗೀಡಾಗಿದ್ದು, ಕ್ಷಮೆಯಾಚನೆ ಸರಿ..!ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಯಾಕಿಷ್ಟು ದ್ವೇಷ..? ಏನಿದು ದ್ವೇಷ ಶಿಕ್ಷಣ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇದಕ್ಕೆ ನಾನಾ ರೀತಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
PublicNext
10/09/2025 11:59 am